ಬೆಂಗಳೂರು: ಐಎಂಎ ಗೋಲ್ಡ್ ಕಂಪನಿಗೆ ಎನ್‍ಒಸಿ ನೀಡುವಂತೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರು ಆರ್.ವಿ ದೇಶಪಾಂಡೆ ಬಳಿ ಮನ್ಸೂರ್ ಖಾನ್‍ನನ್ನು ಕರೆದೊಯ್ದಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಸ್ವತಃ ಕಂದಾಯ ಸಚಿವರೇ ಬಾಯಿಬಿಟ್ಟಿದ್ದಾರೆ.
ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೇಶಪಾಂಡೆ ಈ ಬಗ್ಗೆ ಬಿಚ್ಚಿಟ್ಟಿದ್ದಾರೆ. ಕಳೆದ ತಿಂಗಳು ವಂಚಕ ಮನ್ಸೂರ್ ಖಾನ್ ಹಾಗೂ ರೋಷನ್ ಬೇಗ್ ನನ್ನನ್ನು ಭೇಟಿ ಆಗಿದ್ದರು. ಮನ್ಸೂರ್ ಖಾನ್ ನನ್ನ ಕ್ಷೇತ್ರದವರು, ತುಂಬಾ ಒಳ್ಳೆಯ ಮನುಷ್ಯ. ಮನ್ಸೂರ್ ಖಾನ್ ಕಂಪನಿಗೆ ಎನ್‍ಒಸಿ ಕೊಡುವಂತೆ ನನ್ನ ಬಳಿ ಬೇಗ್ ಮನವಿ ಮಾಡಿದ್ದರು. ಯಾಕೆಂದರೆ ಎನ್‍ಒಸಿ ಸಿಕ್ಕಿದ್ದರೆ ಮನ್ಸೂರ್ ಖಾನ್ ಕಂಪನಿಗೆ ಬ್ಯಾಂಕ್‍ನಿಂದ 600 ಕೋಟಿ ಸಾಲ ಸಿಗುತ್ತಿತ್ತು. ಆದರೆ ಕಾನೂನಿನ ಚೌಕ್ಕಟ್ಟಿನಲ್ಲಿ ಏನು ಮಾಡಲು ಸಾಧ್ಯವೋ ಅದನ್ನಷ್ಟೇ ಮಾಡಲು ಸಾಧ್ಯ ಎಂದು ಬೇಗ್‍ಗೆ ನಾನು ಸ್ಪಷ್ಟವಾಗಿ ಹೇಳಿದ್ದೆ ಎಂದು ತಿಳಿಸಿದರು.ಇದನ್ನೂ ಓದಿ:ಮನ್ಸೂರ್ ಖಾನ್‍ಗೆ ಬ್ಯಾಂಕಿಂದ ಲೋನ್ ಕೊಡಿಸಲು ಯತ್ನ – ಎನ್‍ಒಸಿ ಕೊಡಿಸಲು ಸಚಿವರ ದುಸ್ಸಾಹಸ
Advertisement
Advertisement
ಈ ಮೂಲಕ ಮನ್ಸೂರ್ ಖಾನ್ ಕಂಪನಿಯನ್ನು ಉಳಿಸಲು ಶಿವಾಜಿನಗರದ ಕಾಂಗ್ರೆಸ್ ಶಾಸಕ ಯತ್ನಿಸಿದ್ದರಾ? ದೇಶಪಾಂಡೆ ಬಳಿಗೆ ಖಾನ್‍ನನ್ನು ಕರೆದುಕೊಂಡು ಹೋಗಿದ್ದ ಬೇಗ್ ಅವರಿಗೆ ಇದರಿಂದ ಲಾಭವೇನಿತ್ತು ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಒಟ್ಟಿನಲ್ಲಿ ಈ ಪ್ರಕರಣ ಯಾವೆಲ್ಲಾ ತಿರುವು ಪಡೆದುಕೊಳ್ಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.