ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಸರ್ಕಾರದ ಮಂತ್ರಿಗಳು, ಶಾಸಕರು ಭಾಗಿಯಾಗಿದ್ದಾರೆ. ಹೀಗಾಗಿ ಈ ಹಗರಣವನ್ನು ಸಿಬಿಐಗೆ ನೀಡಬೇಕೆಂದು ಮಲ್ಲೇಶ್ವರ ಶಾಸಕ ಡಾ.ಅಶ್ವತ್ಥನಾರಾಯಣ ಅವರು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದರೂ, ಎಸ್‍ಐಟಿಗೆ ವಹಿಸಲಾಗಿದೆ. 2019ರಿಂದಲೇ ಈ ಸಂಸ್ಥೆಯ ವಂಚನೆ ಬಗ್ಗೆ ರಿಸರ್ವ್ ಬ್ಯಾಂಕ್ ನೇರವಾಗಿ ಸರ್ಕಾರ ಹಾಗೂ ವಿವಿಧ ತನಿಖಾ ಸಂಸ್ಥೆಗಳ ಗಮನಕ್ಕೆ ತಂದು ಎಚ್ಚರಿಕೆ ನೀಡುತ್ತಲೇ ಇದೆ. ಆದರೆ ಆರ್ಥಿಕ ಇಲಾಖೆ ಶಿಫಾರಸ್ಸಿನಂತೆ ಸಿಐಡಿ ತನಿಖೆ ಮಾಡಿ ಐಎಂಎಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಆರೋಪಿಸಿದರು.
ಐಎಂಎ ಸಂಸ್ಥೆ ಹೂಡಿಕೆದಾರ ಸಂಸ್ಥೆ ಎಂದು ಸರ್ಕಾರ ವಾದಿಸುತಿತ್ತು. ಆದರೆ ವಾಸ್ತವದಲ್ಲಿ ಐಎಂಎ ಬ್ಯಾಂಕಿಂಗ್ ವ್ಯವಹಾರವನ್ನೂ ನಡೆಸಿದ್ದು, ಅದಕ್ಕೆ ಪೂರಕ ದಾಖಲೆಗಳಿವೆ. ಆದರೂ ಸರ್ಕಾರ ಕೇವಲ ಕಂದಾಯ ಇಲಾಖೆ ಮತ್ತು ಕಾನೂನು ಇಲಾಖೆ ನಡುವೆ ಪತ್ರ ವ್ಯವಹಾರ ಮಾಡಿ ಸಮಯ ವ್ಯರ್ಥ ಮಾಡಿವೆ. ರಾಜ್ಯ ಸರ್ಕಾರದಿಂದಲೂ ಐಎಂಎಗೆ 600 ಕೋಟಿ ರೂ. ಸಾಲಕ್ಕೆ ಗ್ಯಾರಂಟಿ ಕೊಡಲು ಸಿದ್ದವಾಗಿತ್ತು ಎಂದು ಅಶ್ವತ್ಥ ನಾರಾಯಣ ಕಿಡಿ ಕಾರಿದ್ದಾರೆ.
ಕಳ್ಳನಿಂದಲೇ ಕಳ್ಳತನ: ಮನ್ಸೂರ್ ಕಳ್ಳ ಅವನಿಂದಲೇ ಅಧಿಕಾರಿಗಳು ಹಾಗೂ ಸರ್ಕಾರದ ಪ್ರಮುಖರು ಕಳ್ಳತನ ಮಾಡಿದ್ದಾರೆ. ಐಎಂಎ ಕಂಪನಿಯದ್ದು ಶೇರ್ ಯೋಜನೆಯಲ್ಲ, ಅದು ಠೇವಣಿ ಯೋಜನೆ ಎಂಬುದು ಖಚಿತವಾಗಿದೆ. ಐಎಂಎ ಸಂಸ್ಥೆ ವಾರ್ಷಿಕ ಲೆಕ್ಕ ತಪಾಸಣೆ ಹಾಗೂ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿ ಎಷ್ಟೋ ವರ್ಷಗಳಾಗಿವೆ. ಮನ್ಸೂರ್ ಖಾನ್ ಯಾವ ದೇಶದಲ್ಲಿದ್ದಾನೆ ಎಂಬುದೇ ಸರ್ಕಾರಕ್ಕೆ ಇನ್ನೂ ಖಚಿತವಿಲ್ಲ. ಅಲ್ಲದೆ, ಅವನನ್ನು ಬೆಂಗಳೂರಿಗೆ ಕರೆತರುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರದಿಂದಲೇ ರಕ್ಷಣೆ: ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖರ ರಕ್ಷಣೆಗೆ ಸರ್ಕಾರ ಪ್ರಯತ್ನಿಸುತ್ತಿದ್ದು, ಎಸ್‍ಐಟಿ ತನಿಖೆಯಿಂದ ಪ್ರಯೋಜನವಿಲ್ಲ. ಹೀಗಾಗಿ ಸಿಬಿಐ ತನಿಖೆಯೇ ಆಗಬೇಕು. ಐಎಂಎ ಪ್ರಕರಣದಲ್ಲಿ ಸರ್ಕಾರವೇ ಭಾಗಿಯಾಗಿದ್ದು, ಸಚಿವರು, ಶಾಸಕರು ಶಾಮೀಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‍ಐಟಿ ತನಿಖೆಯಿಂದ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಎಸ್‍ಐಟಿ ಮೂಲಕ ಸಾಕ್ಷ್ಯ ನಾಶಕ್ಕೂ ಪ್ರಯತ್ನಗಳು ನಡೆಸಬಹುದು. ಹೀಗಾಗಿ ಸಾಕ್ಷ್ಯ ನಾಶದ ಭೀತಿ ಇದೆ ಎಂದು ಶಾಸಕ ಅಶ್ವಥನಾರಾಯಣ ಅನುಮಾನ ವ್ಯಕ್ತಪಡಿಸಿದರ