ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ: ಸುಮಲತಾ

Public TV
3 Min Read
sumalatha

ಮಂಡ್ಯ: ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಹಾಗೆಯೇ ಮಂಡ್ಯ ಕೂಡ ನನ್ನ ಬಿಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಹಿನ್ನೆಲೆ ಕೊಚ್ಚಿವೆಲ್ಲಿ ರೈಲಿನ ಮೂಲಕ ಮಂಡ್ಯಕ್ಕೆ ಆಗಮಿಸಿದ ಸುಮಲತಾ ಅವರು ಇಂದು ಪ್ರಗತಿ ಪರಿಶೀಲನೆ ಹಾಗೂ ದಿಶಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಹ್ವಾನಿಸಲು ಸಿದ್ದರಾಮಯ್ಯ ತೀರ್ಮಾನ

Sumalatha JDS MLA 5

ಇದೇ ವೇಳೆ ಮಂಡ್ಯದ ರೈಲ್ವೆ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಶಪಥ ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬ ಆಗುತ್ತಿಲ್ಲ. ನಿಗದಿಯಂತೆ ದಸರಾ ವೇಳೆಗೆ ದಶಪಥ ಹೆದ್ದಾರಿ ಉದ್ಘಾಟನೆಯಾಗಲಿದೆ. ಅಲ್ಲಿಯವರೆಗೂ ಸಾರ್ವಜನಿಕರು ಸಹಕರಿಸಬೇಕು. ಕಾಮಗಾರಿ ನಡೆಯುತ್ತಿರುವುದರಿಂದ ಟ್ರಾಫಿಕ್ ಕಿರಿಕಿರಿ ಆಗುತ್ತದೆ. ಹಾಗಾಗಿ ಟ್ರೈನ್ ಮೂಲಕ ಮಂಡ್ಯಕ್ಕೆ ಆಗಮಿಸಿದ್ದೇನೆ. ಸಂಜೆ ಬೆಂಗಳೂರಿಗೆ ವಾಪಸ್ ಆಗುವ ಸಮಯಕ್ಕೆ ಟ್ರೈನ್ ಸಿಕ್ಕರೆ ಅದರಲ್ಲೇ ಹೋಗುತ್ತೇನೆ ಎಂದು ತಿಳಿಸಿದರು.

dashpath highway

ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ. ನನಗೆ ರಾಜಕೀಯ ಅನಿವಾರ್ಯ ಅಲ್ಲ. ಮಂಡ್ಯ ಹಾಗೂ ಮಂಡ್ಯದ ಜನತೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಮಂಡ್ಯ ಜನರ ಋಣವನ್ನು ತೀರಿಸಲು ನಾನು ರಾಜಕೀಯದಲ್ಲಿದ್ದೇನೆ. ನಾನು ಮಂಡ್ಯ ಬಿಟ್ಟು ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ. ನಾನು ಮಂಡ್ಯ ಬಿಡುವ ಹಗಲುಗನಸನ್ನು ಕೆಲವರು ಕಾಣುತ್ತಿದ್ದಾರೆ. ಆ ಕನಸು ಯಾವತ್ತೂ ನನಸು ಆಗಲ್ಲ. ನಾನು ಎಂದಿಗೂ ಮಂಡ್ಯದಲ್ಲಿಯೇ ಇರುತ್ತೇನೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಅದಕ್ಕಾಗಿ ಕೆಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಈ ರೀತಿಯ ಚೀಪ್ ಗಿಮಿಕ್‍ಗಳನ್ನು ಈಗಲಾದರೂ ಬಿಡಿ. ಮಂಡ್ಯ ಅಭಿವೃದ್ಧಿ ಕಡೆಗೆ ಗಮನಹರಿಸೋಣಾ. ನನಗೆ ಅಧಿಕಾರದ ಆಸೆ ಇಲ್ಲ, ಹೀಗಾಗಿ ಯಾವುದೇ ಭಯ ನನಗಿಲ್ಲ. ಜನ ಆಶೀರ್ವಾದ ಇದ್ದರೆ ನಾವು, ಆಶೀರ್ವಾದ ಇಲ್ಲ ಅಂದರೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ:  ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರಗ್ಸ್ ವಶ – ಆರೋಪಿಗಳ ಬಗ್ಗೆ ಸಿಕ್ಕಿಲ್ಲ ಸುಳಿವು

abhishek ambarish 1

ಬಿಜೆಪಿಗೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ನಾನು ಸದ್ಯ ಯಾವ ಪಕ್ಷವನ್ನು ಸೇರ್ಪಡೆಯಾಗುವ ಆಲೋಚನೆ ಮಾಡಿಲ್ಲ. ಬೆಂಗಳೂರು ಉತ್ತರದಿಂದ ಟಿಕೆಟ್ ಕೇಳಿರುವುದು ಸುಳ್ಳು. ಇದೊಂದು ಹಾಸ್ಯಾಸ್ಪದ ಸುದ್ದಿ. ಈ ರೀತಿ ಕೆಲವರು ಮೂರ್ಖತನದ ಮಾತು ಹೇಳಿದ್ದಾರೆ. ನಾನು ಯಾವ ಪಕ್ಷದ ಮುಂದೆ ಬೇಡಿಕೆ ಇಟ್ಟಿಲ್ಲ. ನನ್ನ ಮಗನಿಗೂ ಟಿಕೆಟ್ ಬೇಡಿಕೆ ಇಟ್ಟಿಲ್ಲ. ಮುಂದೆಯೂ ಮಗನಿಗಾಗಿ ಟಿಕೆಟ್ ಬೇಡಿಕೆ ಇಡುವುದಿಲ್ಲ. ಅಭಿಷೇಕ್ ಯಾವ ಪಕ್ಷಕ್ಕಾದರೂ ಬೇಕು ಅಂದರೆ ಅವರೇ ಕೇಳುತ್ತಾರೆ. ಮೊದಲಿಗೆ ಅಭಿಷೇಕ್‍ಗೆ ರಾಜಕೀಯದ ಆಸಕ್ತಿ ಇರಬೇಕು. ಈಗ ಅಭಿ ಸಿನಿಮಾ ಕ್ಷೇತ್ರದಲ್ಲಿದ್ದಾನೆ. ಸದ್ಯ ಸಿನಿಮಾ ಕ್ಷೇತ್ರದಲ್ಲಿ ಅವನು ಬೆಳೆಯುತ್ತಿದ್ದಾನೆ. ನಾನು ಅವನಿಗಾಗಿ ರಾಜಕೀಯದ ಸ್ಟೂಲ್ ಹಾಕಿಕೊಡಲ್ಲ. ಅವನಿಗೆ ಬೇರೆ ಪಕ್ಷದಿಂದ ಆಫರ್ ಬಂದಿರುವುದು ನಿಜ. ಅದನ್ನು ನಿರ್ಧಾರ ಮಾಡುವುದು ಅಭಿಷೇಕ್‍ಗೆ ಬಿಟ್ಟಿದ್ದು. ಈ ವಿಚಾರದಲ್ಲಿ ನಾನು ನಿರ್ಧಾರ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರತಾಪ್ ಸಿಂಹ ಮತ್ತು ಸುಮಲತಾ ನಡುವೆ ಕೋಲ್ಡ್ ವಾರ್ ವಿಚಾರವಾಗಿ ಮಾತನಾಡಿದ ಅವರು, ನನಗೆ ಯಾರ ಮೇಲೂ ಕೋಲ್ಡ್ ವಾರ್ ಇಲ್ಲ. ನನಗೆ ಕ್ರೆಡಿಟ್ ತೆಗೆದುಕೊಳ್ಳುವ ಅನಿವಾರ್ಯವೂ ಇಲ್ಲ.
ಎಲ್ಲಾ ಕೆಲಸವನ್ನು ಅವರೇ ಮಾಡಿಸುತ್ತಿದ್ದಾರೆ ಎಂದರೆ ನನಗೆ ಬೇಸರ ಇಲ್ಲ. ಹೆದ್ದಾರಿಯ ವಿಚಾರದಲ್ಲಿ ನಮ್ಮ ಜನರಿಗೆ ತೊಂದರೆ ಆದರೆ ನಾನು ಹೋರಾಟ ಮಾಡುತ್ತೇನೆ. ನನ್ನಿಂದ ಯಾವುದೇ ಕಾಮಗಾರಿಗಳು ಡಿಲೇ ಆಗಿಲ್ಲ. ಕೆಹೆಚ್‍ಪಿ ಕಾಲೋನಿಯ ರಸ್ತೆಯ ಬಗ್ಗೆ ಈ ಹಿಂದೆ ಅಧಿಕಾರಿಗಳಿಗೆ ಹೇಳಿದ್ದೆ. ದಿಶಾ ಸಭೆಯಲ್ಲಿ ಈ ರಸ್ತೆ ಸರಿ ಪಡಿಸಲು ಸೂಚನೆ ನೀಡಿದ್ದೆ. ಆ ಕಾಮಗಾರಿ ಪೂರ್ಣವಾಗುವಾಗ ಅವರು ಅಲ್ಲಿಗೆ ಬಂದಿದ್ದಾರೆ. ಅಲ್ಲಿ ಹೋಗಿ ಫೋಟೋ ತೆಗೆಸಿಕೊಂಡು ಹಾಕುವುದರಿಂದ ಏನು ಆಗಲ್ಲ. ಅವರಿಂದಲೇ ಕೆಲಸ ಆಯಿತು ಅಂದರೆ ನಾನು ಏನು ಮಾಡುವುದಕ್ಕೂ ಆಗಲ್ಲ. ನಾನು ಎಲ್ಲವನ್ನು ಫೋಟೋ ತೆಗೆದುಕೊಂಡು ಮೀಡಿಯಾ ಮುಂದೆ ಬರುವುದಕ್ಕೆ ಆಗಲ್ಲ. ಮೀಡಿಯಾ ಮುಂದೆ ಬಂದು ಕೂಳಿತರೆ ಮಾತ್ರ ಕೆಲಸ ಆಗಲ್ಲ ಎಂದು ಹೇಳಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *