ಬೆಂಗಳೂರು: ಪಿಯು ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ಟಾಪರ್ ಆಗಿದ್ದಾರೆ. ಮಲ್ಲೇಶ್ವರಂ ವಿದ್ಯಾಮಂದಿರ ಕಾಲೇಜಿನ ವರ್ಷಿಣಿ. ಎಂ ಭಟ್ ಮತ್ತು ರಾಜಾಜಿನಗರ ಎಎಸ್‍ಸಿ ಪಿಯು ಕಾಲೇಜಿನ ಅಮೃತಾ ಎಸ್‍ಆರ್ 595 ಅಂಕಗಳನ್ನು ಗಳಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದ ಟಾಪರ್ ವರ್ಷಿಣಿ ಪಬ್ಲಿಕ್ ಟಿವಿಯಂದಿಗೆ ಮಾತನಾಡಿ, ನನಗೆ ತುಂಬಾ ಖುಷಿಯಾಗುತ್ತಿದೆ. ಪ್ರತಿ ವರ್ಷ ಪರೀಕ್ಷೆ ಫಲಿತಾಂಶ ಬಂದಾಗ ನಾನು ಸುದ್ದಿ ವಾಹಿನಿಗಳಲ್ಲಿ ಯಾರೂ ಟಾಪ್ ಬರುತ್ತಾರೆಂದು ನೋಡುತ್ತಿದೆ. ಆದರೆ ಈಗ ನಾನು ಆ ಸ್ಥಾನದಲ್ಲಿರುವುದು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ದ್ವಿತೀಯ ಪಿಯುಸಿ ಶುರುವಾದ ಬಳಿಕ ದಿನ 4ರಿಂದ 5 ಗಂಟೆಗಳವರೆಗೂ ಓದುತ್ತಿದೆ. ನಾನು ತುಂಬಾ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಪರಿಶ್ರಮ, ಶಿಕ್ಷಕರ, ಪ್ರಿನ್ಸಿಪಲ್ ಹಾಗೂ ನನ್ನ ಪೋಷಕರ ಸಪೋರ್ಟ್ ಮಾಡಿದ್ದಾರೆ.
Advertisement
Advertisement
ನಾನು ಈಗ ಸಿಎ ಮಾಡಬೇಕೆಂದುಕೊಂಡಿದ್ದೇನೆ. ಈಗಾಗಲೇ ಸಿಎ ಕೋಚಿಂಗ್ ಕ್ಲಾಸ್‍ಗೆ ಸೇರಿಕೊಂಡಿದ್ದೀನಿ. ನನ್ನ ಫಲಿತಾಂಶ ಬಂದಾಗ ನನ್ನ ತಾಯಿ ನಂಬಲೇ ಇಲ್ಲ, ಅವರಿಗೆ ತುಂಬಾ ಖುಷಿಯಾಗಿದೆ. ನನ್ನ ತಂದೆ ಊರಿನಿಂದ ಹೊರ ಹೋಗಿದ್ದು, ಕರೆ ಮಾಡಿ ತಿಳಿಸಬೇಕೆಂದು ವಾಣಿಜ್ಯ ವಿಭಾಗದ ಟಾಪರ್ ವರ್ಷಿಣಿ ತಿಳಿಸಿದ್ದಾರೆ.
ವರ್ಷಿಣಿ ಒಟ್ಟು 595 ಅಂಕಗಳನ್ನು ಪಡೆದಿದ್ದು, ಸಂಸ್ಕೃತ, ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಇನ್ನೂ ಅಕೌಂಟ್ಸ್‍ನಲ್ಲಿ 99, ಆಂಗ್ಲ ಭಾಷೆಯಲ್ಲಿ 100ಕ್ಕೆ 96 ಅಂಕಗಳನ್ನು ಪಡೆದು ವಾಣಿಜ್ಯ ಭಾಗದ ಟಾಪರ್ ಆಗಿದ್ದಾರೆ.