ಬಿಗ್ ಬಾಸ್ (Bigg Boss Kannada) ಮನೆಯಿಂದ ಹೊರ ಬಂದ ನಂತರ ಸಂಗೀತಾ ಕುರಿತಾಗಿಯೂ ಹಲವಾರು ವಿಚಾರಗಳನ್ನು ವಿನಯ್ (Vinay) ಹಂಚಿಕೊಂಡಿದ್ದಾರೆ. ಸಂಗೀತಾ ವಿಷಯ ತಗೊಂಡ್ರೆ ಸಂಗೀತಾ ಪಾರ್ವತಿಯಾಗಿ, ಸತಿಯಾಗಿ ನನ್ನ ಜೊತೆಗೆ ನಟಿಸಿದ್ದಳು. ಇಲ್ಲಿ ಬಂದಾಗ, ಮೊದಲ ವಾರದ ನಾಮಿನೇಷನ್‌ನಲ್ಲಿ ಅವ್ರು ನನ್ನ ಫ್ರೆಂಡ್ಸು, ಹಾಗಾಗಿ ನಾಮಿನೇಟ್ ಮಾಡ್ಬಾರ್ದು ಅಂತ ಇರ್ಲಿಲ್ಲ. ನಾನು ಇಲ್ಲಿಗೆ ಗೇಮ್ ಆಡೋದಿಕ್ಕೆ ಬಂದಿದ್ದೆ. ಅವರು ಮಾಡಿರುವ ತಪ್ಪುಗಳಿಗೆ ನಾಮಿನೇಟ್ ಮಾಡಿದೆ. ಫ್ರೆಂಡ್ಸ್, ಗೊತ್ತಿರೋರು, ಬಿಟ್ಟುಬಿಡೋಣ ಅಂತ ಅಂದುಕೊಳ್ಳಲಿಲ್ಲ. ಅವರಿಬ್ಬರೂ ತಪ್ಪು ಮಾಡಿದ್ರು, ನಾನು ಹೇಳಿದ ಮೇಲೂ ತಪ್ ಮಾಡಿದ್ರು, ನಾಮಿನೇಟ್ ಮಾಡಿದೆ. ಅದರಿಂದ ಅವರು ನನ್ನ ಬಗ್ಗೆ ನಕಾರಾತ್ಮಕವಾಗಿ ತಿಳಿದುಕೊಂಡರು. ಗೊತ್ತಿರೋರನ್ನೇ ನಾಮಿನೇಟ್ ಮಾಡ್ತಾನೆ. ಫ್ರೆಂಡ್ಸ್‌ನೇ ನಾಮಿನೇಟ್ ಮಾಡ್ತಾನೆ ಎಂದುಕೊಂಡರು.
Advertisement
ನೂರಕ್ಕೂ ಹೆಚ್ಚು ದಿನಗಳ ಕಾಲ ಆಕ್ಟಿಂಗ್ ಮಾಡೋದಕ್ಕೆ ಆಗುವುದಿಲ್ಲ. ನೂರಕ್ಕೂ ಹೆಚ್ಚು ದಿನ ಆಕ್ಟ್ ಮಾಡಿದ್ರೂ ಆ ಆಕ್ಟಿಂಗ್‌ನ ಲೈಫ್‌ಲಾಂಗ್ ಹಾಗೇ ಮಾಡಿಕೊಂಡು ಹೋಗಬೇಕು. ಇಷ್ಟರಲ್ಲೇ ಆ ಆಕ್ಟಿಂಗ್ ಮುಗಿಯತ್ತೆ. ಯಾರು ಯಾರು ಮನೆಯೊಳಗೆ ಫೇಕ್ ಆಗಿದ್ರು ಎಂದು ನಿಮಗೆ ಗೊತ್ತಾಗತ್ತೆ. ಯಾಕೆಂದರೆ ಜೀವನಪರ್ಯಂತ ಆಕ್ಟಿಂಗ್ ಮಾಡಿಕೊಂಡು ಹೋಗೋದಕ್ಕೆ ಸಾಧ್ಯವಿಲ್ಲ. ಮನಸಾರೆ ಎಲ್ಲರಿಗೂ ಬೆಸ್ಟ್ ವಿಶಸ್ ಹೇಳ್ತೀನಿ. ಆಕ್ಟಿಂಗ್ ಕಂಟಿನ್ಯೂ ಮಾಡಿ ಲೈಫ್‌ನಲ್ಲಿ ಚೆನ್ನಾಗಿರಿ.
Advertisement
Advertisement
ನಾನು ಎಲ್ಲಿಗೂ ಫೇಕ್ ಆಗಿಲ್ಲ. ಯಾರಿಗೆ ಎಷ್ಟು ಬೇಜಾರಾದ್ರೂ ಪರವಾಗಿಲ್ಲ. ಯಾರು ಎಷ್ಟೇ ಅಹಂಕಾರ ಎಂದು ಹೇಳಿದರೂ ಪರವಾಗಿಲ್ಲ. ಯಾರು ಎಷ್ಟೇ ವಿಲನ್ ಅಂದ್ರೂ ಪರವಾಗಿಲ್ಲ… ನಾನದನ್ನು ಒಪ್ಕೋತೀನಿ. ನಾನು ವಿಲನ್ನೇ. ಮನೆಯೊಳಗೆ ಜೆನ್ಯೂನ್ ಆಗಿ ಆಡಿದ್ದು, ನಮ್ರತಾ, ಪವಿ… ಮೈಕಲ್ ಜಂಟಲ್‌ಮನ್. ಸಿರಿ, ವರ್ತೂರು ಸಂತೋಷ್ ಹೀಗೆ ಬೆರಳೆಣಿಕೆಯಷ್ಟು ಜನರು ಮಾತ್ರವೇ ಜೆನ್ಯೂನ್ ಆಗಿದ್ರು. ಕಾರ್ತಿಕ್, ಸಂಗಿತಾ, ಮತ್ತು ಪ್ರತಾಪ್ ಟಾಪ್ 3ಗೆ ಹೋಗಿದ್ದಾರೆ ಅಂದ್ರೆ ಅದರ ಕ್ರೆಡಿಟ್ ನನಗೇ ಸಲ್ಲಬೇಕು. ಆ ಮೂವರೂ ನನ್ನ ಜೊತೆಗೆ ಜಗಳ ಮಾಡಿಕೊಂಡೇ, ಫೈಟ್ ಮಾಡಿಕೊಂಡೇ ಅಲ್ಲಿಗೆ ತಲುಪಿರುವುದು. ನನಗೆ ಕಾರ್ತೀಕ್ ಗೆಲ್ಲಬೇಕು ಅಂತಲೇ ಆಸೆ ಇತ್ತು.
Advertisement
ಜಿಯೊಸಿನಿಮಾ ಫನ್ ಫ್ರೈಡೆ ಬಂತು ಅಂದ್ರೇ ಕುತೂಹಲ ನಮಗೆ. ಜಗಳ ಎಲ್ಲ ಮಾಡದೆ ಮಜಾ ಮಾಡೋಕೆ ಸಿಗತ್ತೆ ಅಂತ. ಮೊದಲ ವಾರದ ಮ್ಯೂಸಿಕಲ್ ಪಾಟ್ ಗೇಮ್ ನನಗೆ ತುಂಬ ಇಷ್ಟವಾಗಿತ್ತು. ಲಾಸ್ಟ್‌ನಲ್ಲಿ ಬಾಲ್‌ನ ಆ ಕಡೆ ಈ ಕಡೆ ತಳ್ಳುವ ಟಾಸ್ಕ್ ಚೆನ್ನಾಗಿತ್ತು. ಎಲ್ಲ ಫ್ರೈಡೇಗಳೂ ಸಖತ್ತಾಗಿದ್ದವು. ಅದಕ್ಕಾಗಿ ಕಾಯುತ್ತಿದ್ದೆವ ನಾವು. ಯಾರಿಗೆ ಏನು ಅನಿಸಿತೋ ನನಗೆ ಗೊತ್ತಿಲ್ಲ. ನಾನು ನನ್ನ ಮನಸ್ಸಿಗೆ ಮತ್ತು ನನ್ನ ಫ್ಯಾಮಿಲಿಗೆ ನಿಷ್ಠನಾಗಿದ್ದೆ. ಅಷ್ಟೇ ಸಾಕು. ಬಿಗ್‌ಬಾಸ್ ಮನೆಯಲ್ಲಿ ನನ್ನ ಫೆವರೇಟ್ ಮೊಮೆಂಟ್ ಅಂದರೆ ಕ್ಯಾಪ್ಟನ್ ಆಗಿದ್ದು. ಹಾಗೆಯೇ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಇನ್ನೊಂದು ಅವಿಸ್ಮರಣೀಯ ಗಳಿಗೆ. ಯಾಕೆಂದರೆ ನೂರಕ್ಕೂ ಹೆಚ್ಚು ದಿನಗಳ ಕಾಲ ಕಾದು ಕಾದು, ಇನ್ನು ಸಿಗುವುದಿಲ್ಲ ಎಂಬ ಹಂತದಲ್ಲಿ ಸಿಕ್ಕಿದ ಚಪ್ಪಾಳೆ ಅದು. ಅದರಲ್ಲಿಯೂ ಅವರು ಹೇಳಿದ ಒಂದಿಷ್ಟು ಮಾತುಗಳು ಆಳಕ್ಕೆ ನಾಟಿತು.
ಬಿಗ್‌ಬಾಸ್‌ಗೆ ತುಂಬ ತುಂಬ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟಪಡ್ತೀನಿ. ಎಲ್ಲೋ ಇದ್ದಿದ್ದ ನನ್ನನ್ನು ಕರೆದುಕೊಂಡು ಬಂದು, ಇಷ್ಟುದೊಡ್ಡ ವೇದಿಕೆ ಕೊಟ್ಟಿದೆ. ಇಷ್ಟು ದಿನ ನನ್ನನ್ನು ಮಹದೇವ, ಶಿವ ಎಂದು ನನ್ನ ಪಾತ್ರಗಳ ಮೂಲಕ ಗುರುತು ಹಿಡಿಯುತ್ತಿದ್ದರು. ಈಗ ಹೊರಗೆ ಬಂದಾಗ ಜನರು ನನ್ನನ್ನು ವಿನಯ್ ಎಂದು ಗುರ್ತು ಹಿಡಿಯುತ್ತಾರೆ. ಆ ವಿಷಯಕ್ಕೆ ನಾನು ಬಿಗ್‌ಬಾಸ್‌ಗೆ ಕೃತಜ್ಞನಾಗಿರುತ್ತೇನೆ.