ಹಾಸನ: ನನ್ನ ಹೆಸರು ಸಿದ್ದರಾಮಯ್ಯ. ನಾನು ಹುಲಿಯೂ ಅಲ್ಲ ಸಿಂಹನೂ ಅಲ್ಲ. ಐ ಆಮ್ ಓನ್ಲಿ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ಹುಲಿಯಾ ಎಂದು ಕರೆಯುತ್ತಿದ್ದ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಹೊಳೆನರಸೀಪುರ ತಾಲೂಕಿನ ದೊಡ್ಡಳ್ಳಿ ಕೊಪ್ಪಲು ಗ್ರಾಮದಲ್ಲಿ, ಹೊನ್ನಕಳಸಮ್ಮ ದೇವರ ವಿಗ್ರಹ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿದ್ದರಾಮಯ್ಯ ಮಾತನಾಡುವಾಗ ಅಭಿಮಾನಿಗಳು ಪದೇ ಪದೇ ಹುಲಿಯಾ ಎಂದು ಕೂಗಲಾರಂಭಿಸಿದರು.
Advertisement
Advertisement
ಈ ವೇಳೆ ತಾವು ಹುಲಿಯಾ ಆದ ಸನ್ನಿವೇಶ ನೆನಪಿಸಿಕೊಂಡ ಸಿದ್ದರಾಮಯ್ಯ, ಕಾಗವಾಡದಲ್ಲಿ ಒಂದು ಸಭೆಯಲ್ಲಿ ಭಾಷಣ ಮಾಡುತ್ತಿದ್ದೆ. ಇಂದಿರಾಗಾಂಧಿ ಬಗ್ಗೆ ಮಾತನಾಡುತ್ತಿದ್ದೆ. ಅಲ್ಲಿ ಒಬ್ಬ ಹೌದು ಹುಲಿಯಾ ಅಂದ. ತಳ್ರೀ ಅವನ ಆಚೆಗೆ ಅಂದೆ. ಅವನು ಮತ್ತೆರೆಡು ಬಾರಿ ಅದನ್ನೇ ಹೇಳಿದ. ಅವನು ನನ್ನ ಮನೆಗೆ ಬಂದು ಭೇಟಿಯೂ ಮಾಡಿದ. ಆದರೆ ನಾನು ಹುಲಿಯೂ ಅಲ್ಲ ಸಿಂಹವೂ ಅಲ್ಲ. ನಾನು ಓನ್ಲಿ ಸಿದ್ದರಾಮಯ್ಯ ಎಂದು ತಿಳಿಸಿದರು.