ನಾನು ಜಿಟಿಡಿಗೆ ಮಗ ಇದ್ದಂತೆ: ಪ್ರತಾಪ್ ಸಿಂಹ

Public TV
1 Min Read
mys prathap simha 1

ಮೈಸೂರು: ಸಚಿವರು, ಶಾಸಕರನ್ನು ಮೈಸೂರು ಸಂಸದ ಪ್ರತಾಪ್‍ ಸಿಂಹ ಮನಸಾರೆ ಹೊಗಳಿದರು. ಮೂವರು ನಾಯಕರು ಹಾಗೂ ಜಿಲ್ಲಾಧಿಕಾರಿಗಳನ್ನು ಹೊಗಳುವ ಮೂಲಕ ತಮ್ಮ ಇಡೀ ಭಾಷಣವನ್ನು ಪ್ರತಾಪ್ ಸಿಂಹ ಹೊಗಳಿಕೆ ಮೀಸಲಿಟ್ಟರು.

ಮೈಸೂರಿನ ಹೊರವಲಯದ ಯಲಚನಹಳ್ಳಿಯಲ್ಲಿ ನಡೆಯುತ್ತಿದ್ದ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಅವರು ಸೋಮಣ್ಣ ಹಾಗೂ ಶಾಸಕ ಜಿ.ಟಿ ದೇವೇಗೌಡ ಅವರನ್ನು ಜೋಡೆತ್ತು ಎಂದು ಬಣ್ಣಿಸಿದರು. ಮೈಸೂರಿನ ಅಭಿವೃದ್ಧಿಗೆ ಇವರು ಜೋಡೆತ್ತು ಎಂದರು. ಬಳಿಕ ನಾನು ಜಿಟಿಡಿಗೆ ಮಗ ಇದ್ದಂತೆ ಎಂದು ತಿಳಿಸಿದರು.

mys gtd 2

ಸಚಿವ ಮಾಧುಸ್ವಾಮಿ ಅವರನ್ನು ಅದ್ಭುತ ಭಾಷಣಕಾರ ಎಂದು ಪ್ರಶಂಸಿದರು. ಮೈಸೂರು ಜಿಲ್ಲಾಧಿಕಾರಿಯನ್ನು ರಾಜ್ಯದ ನಂ. 1 ಜಿಲ್ಲಾಧಿಕಾರಿ ಎಂದು ಶ್ಲಾಘಿಸಿದರು. ಇಡೀ ಭಾಷಣದ ತುಂಬ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಹೊಗಳಿದರು.

ಅಲ್ಲದೆ ನಾನು ಜಿ.ಟಿ ದೇವೇಗೌಡರಿಗೆ ಮಗ ಇದ್ದಂತೆ. ಅವರು ಹರೀಶ್ ಗೌಡನನ್ನು ಪ್ರೀತಿಸುವಂತೆ ನನ್ನನ್ನು ನೋಡಿಕೋಳ್ತಾರೆ. ಅವರ ಆಶೀರ್ವಾದ ನನ್ನ ಮೇಲೆ ಇದ್ದೆ ಇರುತ್ತೆ. ಅವರಿಗೆ ನಾನು ಮಗ ಇದ್ದಂತೆ. ಅಭಿವೃದ್ಧಿ ವಿಚಾರದಲ್ಲಿ ನನ್ನನ್ನು ಸಂಸದ ಅಂತಾನು ನೋಡದೆ ಬೈತಾರೆ. ಅವರಿಗೆ ಬೇಕಾರೋದು ಅಭಿವೃದ್ಧಿ ಮಾತ್ರ. ಗರಬಡಿದವರಂತೆ ಅಭಿವೃದ್ಧಿಗಾಗಿ ಓಡಾಡ್ತಾರೆ. ಜಿಟಿಡಿಯಂತ ನಾಯಕರು ನಮಗೆ ಬೇಕಾಗಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *