ಲಕ್ನೋ: ನಾನು ಪಾಕಿಸ್ತಾನದ ಮಗಳಾಗಿದ್ದೆ. ಆದರೆ ಈಗ ನಾನು ಭಾರತದ ಸೊಸೆಯಾಗಿದ್ದೇನೆ ಎಂದು ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್ (Seema Haider) ಹೇಳಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಹಲವಾರು ಮಹತ್ವದ ನಿರ್ಧಾರ ಕೈಗೊಂಡಿದೆ. ಅಲ್ಲದೇ 48 ಗಂಟೆಗಳಲ್ಲಿ ಪಾಕ್ ಪ್ರಜೆಗಳು (Pakistan Citizens) ಭಾರತ ಬಿಟ್ಟು ತೊಲಗುವಂತೆ ಸೂಚನೆ ನೀಡಿದೆ. ಈ ಬೆನ್ನಲ್ಲೇ ಪ್ರಿಯಕರನಿಗೋಸ್ಕರ 4 ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್ ಮಾತನಾಡಿರುವ ವೀಡಿಯೋವೊಂದು ವೈರಲ್ ಆಗಿದೆ. ಇದನ್ನೂ ಓದಿ: ಲಂಡನ್‌ನಲ್ಲಿ ಭಾರತೀಯರ ಪ್ರತಿಭಟನೆ ವೇಳೆ ಕತ್ತು ಕೊಯ್ಯುವ ಸನ್ನೆ ಮಾಡಿದ ಪಾಕ್ ಅಧಿಕಾರಿ
ನಾನು ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ನಾನು ಭಾರತದಲ್ಲಿ ಉಳಿಯಲು ಅವಕಾಶ ನೀಡುವಂತೆ ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡುತ್ತೇನೆ. ಸಚಿನ್ ಮೀನಾ ಅವರನ್ನು ಮದುವೆಯಾದ ಬಳಿಕ ನಾನು ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದೇನೆ. ನನಗೆ ಭಾರತದಲ್ಲಿಯೇ ಇರಲು ಬಿಡಿ ಎಂದು ಸೀಮಾ ವೀಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಇರಾನ್‌ನ ಪೋರ್ಟ್ ಸಿಟಿಯಲ್ಲಿ ಬಾಂಬ್ ಸ್ಫೋಟ – ನಾಲ್ವರು ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ
ಸೀಮಾ ಇನ್ನು ಮುಂದೆ ಪಾಕಿಸ್ತಾನಿ ಪ್ರಜೆಯಲ್ಲ. ಅವರು ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಮೀನಾ ಅವರನ್ನು ವಿವಾಹವಾಗಿದ್ದಾರೆ. ಅಲ್ಲದೇ ಇತ್ತೀಚಿಗೆ ಮಗುವಿಗೆ ಜನ್ಮ ನೀಡಿದರು. ಅವರ ಪೌರತ್ವ ಈಗ ಅವರ ಭಾರತೀಯ ಪತಿಯೊಂದಿಗೆ ಸಂಪರ್ಕ ಹೊಂದಿದೆ. ಆದ್ದರಿಂದ ಕೇಂದ್ರದ ನಿರ್ದೇಶನವು ಅವರಿಗೆ ಅನ್ವಯಿಸಬಾರದು ಎಂದು ವಕೀಲ ಎಪಿ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್‌ಗೆ ಶೋಕಸಾಗರದ ವಿದಾಯ
ಸೀಮಾ ಹೈದರ್ ಯಾರು?
ಪಾಕಿಸ್ತಾನದ ಸಿಂಧ್‌ನ 27 ವರ್ಷದ ಮಹಿಳೆ ಸೀಮಾ ಹೈದರ್ ತನ್ನ ಪ್ರೇಮಕಥೆಯಿಂದಾಗಿ ಸುದ್ದಿಯಾಗಿದ್ದರು. ಕೋವಿಡ್-19 ಸಮಯದಲ್ಲಿ, ಆನ್‌ಲೈನ್ ಗೇಮ್ ಪಬ್‌ಜಿ ಮೂಲಕ ಭಾರತದ 22 ವರ್ಷದ ಸಚಿನ್ ಮೀನಾ ಅವರೊಂದಿಗೆ ಸಂಪರ್ಕ ಬೆಳೆಸಿದ್ದರು. ಅವರ ಸ್ನೇಹ ಬಳಿಕ ಪ್ರೀತಿಗೆ ಮಾರ್ಪಟ್ಟಿತು. ಸೀಮಾ ಮೇ 2023ರಲ್ಲಿ ದುಬೈ ಮತ್ತು ನೇಪಾಳದ ಮೂಲಕ 4 ಮಕ್ಕಳೊಂದಿಗೆ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದರು. ಬಳಿಕ ಪ್ರಿಯಕರ ಸಚಿನ್‌ನನ್ನು ಮದುವೆಯಾಗಿ ಅವರೊಂದಿಗೆ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿದ್ದಾರೆ. ಇತ್ತೀಚಿಗಷ್ಟೇ ಸಚಿನ್ ಹಾಗೂ ಸೀಮಾ ದಂಪತಿಗೆ ಹೆಣ್ಣು ಮಗು ಜನಿಸಿದೆ. ಇದನ್ನೂ ಓದಿ: ಐಶ್ವರ್ಯ ಗೌಡ ಮನೆ ಮೇಲೆ ಇಡಿ ದಾಳಿ – 2.25 ಕೋಟಿ ನಗದು ಪತ್ತೆ