ನಾನು ಈಗಾಗಲೇ ರಣ್‍ಬೀರ್ ಜೊತೆ ಮದುವೆಯಾಗಿದ್ದೇನೆ: ಆಲಿಯಾ ಭಟ್

Public TV
1 Min Read
alia bhatt

ಮುಂಬೈ: ನಾನು ಈಗಾಗಲೇ ರಣ್‍ಬೀರ್ ಕಪೂರ್ ಅವರನ್ನು ಮದುವೆಯಾಗಿದ್ದೇನೆ ಎಂದು ಬಾಲಿವುಡ್ ನಟಿ ಆಲಿಯಾ ಭಟ್ ಹೇಳಿದ್ದಾರೆ.

ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ರಣ್‍ಬೀರ್ ಹಾಗೂ ಆಲಿಯಾ ಭಟ್ ಜೋಡಿ ಕೂಡ ಒಂದು. ಅಯಾನ್ ಮುಖರ್ಜಿ ಅವರ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರೀಕರಣದ ವೇಳೆ ಇಬ್ಬರು ಡೇಟಿಂಗ್ ಆರಂಭಿಸಿದರು. ಆರಂಭದಲ್ಲಿ ತಮ್ಮ ರಿಲೆಶನ್ ಶಿಪ್ ಬಗ್ಗೆ ಎಲ್ಲೂ ಬಾಯಿ ಬಿಡದ ಈ ಜೋಡಿ ನಂತರದ ದಿನಗಳಲ್ಲಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಬಹಿರಂಗಪಡಿಸಿದರು. ಸದ್ಯ ರಣ್‍ಬೀರ್ ಹಾಗೂ ಆಲಿಯಾ ಮದುವೆ ಯಾವಾಗ ಆಗುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇದೀಗ ಆಲಿಯಾ ಭಟ್ ನನ್ನ ಹಾಗೂ ರಣ್‍ಬೀರ್ ಕಪೂರ್ ಮದುವೆ ಈಗಾಗಲೇ ಆಗಿದೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ.

aliaabhatt 51180397 123438015399005 4318008707731957125 n e1563939119468

ಹೌದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಆಲಿಯಾ ಭಟ್ ಅವರು, ನಾನು ಈಗಾಗಲೇ ರಣ್‍ಬೀರ್ ಅವರೊಂದಿಗೆ ಮದುವೆಯಾಗಿಬಿಟ್ಟಿದ್ದೇನೆ ಎಂದು ನನ್ನ ತಲೆಯಲ್ಲಿ ಅಂದುಕೊಂಡು ಬಿಟ್ಟಿದ್ದೇನೆ. ಕೊರೊನಾ ಇಲ್ಲದಿದ್ದರೆ ಈಗಾಗಲೇ ನನ್ನ ಹಾಗೂ ರಣ್‍ಬೀರ್ ಮದುವೆ ನಡೆಯುತ್ತಿತ್ತು. ಕೊರೊನಾ ನಮ್ಮ ಜೀವನದ ಮೇಲೆ ಹೊಡೆತ ಬಿದ್ದಿದೆ. ಅವರು ಹೇಳಿದ್ದು ನಿಜ, ಎಲ್ಲ ನಡೆಯುವುದರ ಹಿಂದೆ ಒಂದು ಕಾರಣವಿರುತ್ತದೆ. ನಾವು ಮದುವೆಯಾದ ಮೇಲೂ ಹೀಗೆ ಸುಂದರವಾಗಿ ಸಮಯ ಕಳೆಯುತ್ತೇವೆ ಅನಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಬುರ್ಕಾ ಧರಿಸದೇ ಧೈರ್ಯ ಪ್ರದರ್ಶಿಸಿ: ಕಂಗನಾ ರಣಾವತ್

ranbir alia

ಆಲಿಯಾರನ್ನು ರಣ್‍ಬೀರ್ ಬಹಳ ಇಷ್ಟಪಡುತ್ತಾರೆ. ಈ ಜೋಡಿಯಾ ಮದುವೆಗೆ ಎರಡು ಕುಟುಂಬಗಳು ಒಪ್ಪಿಕೊಂಡಿದೆ. ಸದ್ಯ ಇತ್ತೀಚೆಗಷ್ಟೇ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಟ್ರೇಲರ್ ಬಿಡುಗಡೆಯಾಗಿದೆ. ಇದರ ಬೆನ್ನೆಲೆ ಅಭಿಮಾನಿಗಳಿ ಶೀಘ್ರವೇ ರಣ್‍ಬೀರ್ ಹಾಗೂ ಆಲಿಯಾ ಮದುವೆಯನ್ನು ನಾವು ನಿರೀಕ್ಷಿಸಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ.  ಇದನ್ನೂ ಓದಿ: ಪವರ್ ಫುಲ್ ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ

Share This Article
Leave a Comment

Leave a Reply

Your email address will not be published. Required fields are marked *