ಶ್ರೀನಗರ: ನಾನು ಕಾಶ್ಮೀರಿ ಪಂಡಿತ, ನಮ್ಮದು ಕಾಶ್ಮೀರಿ ಪಂಡಿತರ ಕುಟುಂಬ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಎರಡು ದಿನಗಳ ಜಮ್ಮುವಿಗೆ ಭೇಟಿ ನೀಡಿರುವ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಬೆಳಿಗ್ಗೆ ಕಾಶ್ಮೀರಿ ಪಂಡಿತರ ನಿಯೋಗವು ನನ್ನನ್ನು ಭೇಟಿ ಮಾಡಿತು. ಕಾಂಗ್ರೆಸ್ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಬಿಜೆಪಿ ಏನೂ ಮಾಡಿಲ್ಲ ಎಂದು ಅವರು ನನಗೆ ತಿಳಿಸಿದರು ಎಂದರು.
Advertisement
Advertisement
ನಾನು ಮನೆಗೆ ಬಂದಿದ್ದೇನೆ ಎಂದು ಅನಿಸುತ್ತಿದೆ. ನನ್ನ ಕುಟುಂಬವು ಜಮ್ಮು ಮತ್ತು ಕಾಶ್ಮೀರದೊಂದಿಗೆ ಸುದೀರ್ಘ ಸಂಬಂಧ ಹೊಂದಿದೆ ಎಂದು ತಿಳಿಸಿದರು. ಈ ವೇಳೆ ಕಾಶ್ಮೀರಿ ಪಂಡಿತ ಸಹೋದರರಿಗೆ ನಾನು ಏನಾದರೂ ಮಾಡುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ
Advertisement
ಜಮ್ಮು ಕಾಶ್ಮೀರಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದ್ದು, ಈಗ ನನಗೆ ನೋವಾಗಿದೆ. ಇಲ್ಲಿ ಸಹೋದರತ್ವವಿದೆ. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಆ ಸಹೋದರತ್ವದ ಬಂಧವನ್ನು ಮುರಿಯಲು ಪ್ರಯತ್ನಿಸುತ್ತಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
Advertisement
सीधा सा सवाल है-
– आपका 'राज्य का दर्जा' गया तो
तो माँ लक्ष्मी, माँ दुर्गा और माँ सरस्वती की शक्ति घटी है या बढ़ी है?
जवाब है- घटी है : श्री @RahulGandhi #JammuWithRahulGandhi pic.twitter.com/E6wNOdI2UZ
— Congress (@INCIndia) September 10, 2021
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜಮ್ಮು ಮತ್ತು ಕಾಶ್ಮೀರವನ್ನು ಬಿಜೆಪಿ ದುರ್ಬಲಗೊಳಿಸಿದೆ. ರಾಜ್ಯ ಸ್ಥಾನಮಾನವನ್ನು ಕಾಶ್ಮೀರಿಗಳಿಂದ ಕಿತ್ತುಕೊಳ್ಳಲಾಗಿದೆ. ಈ ಸ್ಥಾನಮಾನವನ್ನು ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಈಗ ಬಿಡುಗಡೆಯಾಗಲ್ಲ, ದೀಪಾವಳಿಗೂ ಮೊದಲು ಬರಲಿದೆ ಜಿಯೋ ಫೋನ್
ಗುರುವಾರ ರಾಹುಲ್ ಗಾಂಧಿ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕತ್ರಾ ಬೇಸ್‍ಕ್ಯಾಂಪ್‍ನಿಂದ ತ್ರಿಕೂಟ ಬೆಟ್ಟಗಳ ಮೂಲಕ ಕಾಲ್ನಡಿಗೆಯಲ್ಲಿ 13 ಕಿ.ಮೀ ಯಾತ್ರೆ ನಡೆಸಿ ದೇಗುಲವನ್ನು ತಲುಪಿದ್ದರು. ಜಮ್ಮು ಕಾಶ್ಮೀರದ ನಂತರ ಅವರು ಲಡಾಖ್‍ಗೆ ಭೇಟಿ ನೀಡಲಿದ್ದಾರೆ.