– ತೈಲ ಖರಿದಿ ಕೊಲ್ಲುವವರಿಗೆ ಫಂಡಿಂಗ್ ಮಾಡಿದಂತೆ ಎಂದ ಕ್ರಿಸ್ ರೈಟ್
ವಾಷಿಂಗ್ಟನ್: ನಾನು ಭಾರತದ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿರುವ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ (Chris Wright೦, ಭಾರತವು ರಷ್ಯಾದ ತೈಲ (Russian Oil) ಖರೀದಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡುತ್ತಾ, ಭಾರತದ ಜೊತೆಗೆ ಇಂಧನ, ವ್ಯಾಪಾರದಂತಹ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar0 ಅವರೊಂದೊಗೆ ಚರ್ಚಿಸಿದ್ದೇನೆ. ಆದ್ರೆ ಅವರು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿರುತ್ತಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕದ H-1B ವೀಸಾ ಹೊಡೆತ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಸ್ವಾಗತ
ನಾವು ಭಾರತದ ಜೊತೆಗೆ ಉಜ್ವಲ ಭವಿಷ್ಯವನ್ನು ಎದುರು ನೋಡುತ್ತಿದ್ದೇವೆ. ಆದ್ರೆ ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ಜೊತೆಗಿನ ಹೊಂದಾಣಿಕೆಯನ್ನು ಅವರು ಕೈಬಿಡಬೇಕು ಕ್ರಿಸ್ ರೈಟ್ ತಿಳಿಸಿದ್ರು. ಇದನ್ನೂ ಓದಿ: ಟ್ರಂಪ್ H-1B ವೀಸಾ ಟಫ್ ರೂಲ್ಸ್ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಯುದ್ಧ ಕೊನೆಗೊಳ್ಳುವುದನ್ನ ಹೊರತುಪಡಿಸಿ ಬೇರೇನನ್ನೂ ಬಯಸುವುದಿಲ್ಲ. ಯುರೋಪ್ ರಾಷ್ಟ್ರಗಳು ಈಗಾಗಲೇ ಯುದ್ಧ ನಿಲ್ಲಿಸೋದಕ್ಕಾಗಿ ರಷ್ಯಾದ ಮೇಲೆ ಒತ್ತಡ ಹೇರಲು ಎಲ್ಲಾ ಮಾರ್ಗಗಳನ್ನ ಹುಡುಕುತ್ತಿವೆ. ಭಾರತ ತೈಲ ಖರೀದಿ ನಿಲ್ಲಿಸಿದ್ರೆ ಸಂಘರ್ಷ ನಿಲ್ಲಿಸಲು ಹೆಚ್ಚು ಪ್ರಯೋಜನವಾಗುತ್ತದೆ. ಭಾರತದ ಜೊತೆಗೆ, ಇಂಧನ ಮತ್ತು ಮುಕ್ತ ವ್ಯಾಪಾರ ಸಹಕಾರದ ವಿಷಯದಲ್ಲಿ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್?
ಇನ್ನೂ ಭಾರತವು ನಿರಂತರವಾಗಿ ತೈಲ ಖರೀದಿಸುತ್ತಿರುವ ಬಗ್ಗೆ ಮಾತನಾಡಿದ ಕ್ರಿಸ್ ರೈಟ್, ಭಾರತವು ರಷ್ಯಾದ ತೈಲ ಖರೀದಿ ಮಾಡುವ ಅಗತ್ಯವಿಲ್ಲ. ಏಕೆಂದ್ರೆ ಭಾರತ ರಿಯಾಯಿತಿ ದರದಲ್ಲಿ ರಷ್ಯಾದ ತೈಲ ಖರೀದಿ ಮಾಡುವುದು, ಪ್ರತಿವಾರ ಸಾವಿರಾರು ಜನರನ್ನು ಕೊಲ್ಲುವ ವ್ಯಕ್ತಿಗೆ ಹಣ ನೀಡಿದಂತಾಗುತ್ತಿದೆ. ಅಮೆರಿಕ ಭಾರತವನ್ನು ಶಿಕ್ಷಿಸಲು ಬಯಸುವುದಿಲ್ಲ, ಬದಲಾಗಿ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ. ಹಾಗಾಗಿ ರಷ್ಯಾದ ತೈಲ ಖರೀದಿ ನಿಲ್ಲಿಸಬೇಕು. ಅಮೆರಿಕ ಬಳಿ ಮಾರಾಟ ಮಾಡಲು ತೈಲ ಇದೆ. ಭಾರತ ನಮ್ಮ ಸಂಬಂಧವನ್ನು ಬಯಸಿದ್ರೆ, ರಷ್ಯಾದ ತೈಲ ಖರೀದಿ ನಿಲ್ಲಿಸಲಿ ಎಂದು ಮನವಿ ಮಾಡಿದ್ದಾರೆ.