ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಲವ್ವಿಡವ್ವಿ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇವರಿಬ್ಬರ ವಯಸ್ಸಿನ ಅಂತರವನ್ನಿಟ್ಟುಕೊಂಡು ದಿನವೂ ಟ್ರೋಲ್ ಮಾಡಲಾಗುತ್ತಿದೆ. ಹೀಗಾಗಿ ಸುಶ್ಮಿತಾ ಸೇನ್ ಅವರಿಗೆ ಗೋಲ್ಡನ್ ಡಿಗ್ಗರ್ ಎಂದು ಜರಿಯಲಾಗುತ್ತದೆ. ಇದರಿಂದ ಬೇಸತ್ತು ಹೋಗಿರುವ ಸುಶ್ಮಿತಾ ಸೇನ್, ವಿರೋಧಿಗಳಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ. ನಾನು ಗೋಲ್ಡನ್ ಡಿಗ್ಗರ್ ಅಲ್ಲ, ಡೈಮಂಡ್ ಡಿಗ್ಗರ್ ಎಂದು ತಿರುಗೇಟು ನೀಡುತ್ತಿದ್ದಾರೆ.
ಲಲಿತ್ ಮೋದಿಗೆ ವಯಸ್ಸಾಗಿದೆ. ಈ ವೇಳೆಯಲ್ಲಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ ಅಂದರೆ, ಅದು ಕೇವಲ ಆತನ ಬಳಿ ಇರುವ ಹಣದಿಂದಾಗಿ ಎಂದು ಹಲವರು ಟೀಕೆ ಮಾಡುತ್ತಿದ್ದಾರೆ. ಇದು ಮಗಳು ಮತ್ತು ತಂದೆ ಸಂಬಂಧ ಎಂದೂ ಕಾಳೆಯುತ್ತಿದ್ದಾರೆ. ಅಲ್ಲದೇ, ನಾನಾ ರೀತಿಯಲ್ಲಿ ಸುಶ್ಮಿತಾ ಅವರಿಗೆ ಟೀಕೆ ಮಾಡಲಾಗುತ್ತಿದೆ. ಸ್ವತಃ ಸುಶ್ಮಿತಾ ಅವರ ಮಾಜಿ ಬಾಯ್ ಫ್ರೆಂಡ್ಸ್ ಕೂಡ ಅಖಾಡಕ್ಕೆ ಇಳಿದಿದ್ದಾರೆ. ಹಾಗಾಗಿ ಸುಶ್ಮಿತಾ ಬೇಸತ್ತು ಹೋಗಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್ಬೀರ್ ಕೊಟ್ರು ಬ್ರೇಕಿಂಗ್ ನ್ಯೂಸ್
ಗೋಲ್ಡನ್ ಡಿಗ್ಗರ್ ಎಂಬ ಪದವನ್ನು ಬಳಸುತ್ತಿದ್ದಂತೆಯೇ ಕೆಂಡಾಮಂಡಲಾಗಿರುವ ಸುಶ್ಮಿತಾ, ತಾವು ಅದಕ್ಕಿಂತಲೂ ಹೆಚ್ಚಿನ ಬೆಲೆಯ ಡೈಮಂಡ್ ಡಿಗ್ಗರ್ ಎಂದು ತಮ್ಮನ್ನು ತಾವೇ ಆಡಿಕೊಂಡಿದ್ದಾರೆ. ಸುಶ್ಮಿತಾ ಅವರು ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ದುಡ್ಡಿನ ಹಿಂದೆ ಹೋಗುವಂತಹ ಮಹಿಳೆ ತಾವಲ್ಲ ಎಂದು ಬರೆದುಕೊಂಡಿದ್ದಾರೆ. ಈ ಯಾವ ಟೀಕೆಗೂ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದೂ ಅವರು ಹೇಳಿದ್ದಾರೆ.