-16 ವೋಟಿನಿಂದ ಸೋತಿದ್ದ ಸೌಮ್ಯ ರೆಡ್ಡಿ ನನ್ನ ಪಾಲಿಗೆ ಶಾಸಕಿನೇ ಎಂದ ಸಚಿವೆ
ಬೆಂಗಳೂರು: ನಾನು ಹುಟ್ಟಿದ್ದು 1975ರಲ್ಲಿ, ನನಗೀಗ 50 ವರ್ಷ, ಆದರೆ ನಾನು ಹಾಗೆ ಕಾಣಿಸುತ್ತೀನಾ? ವಯಸ್ಸು ಮುಖ್ಯ ಅಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು.ಇದನ್ನೂ ಓದಿ: ಎಲ್ಲ ಸಮುದಾಯಗಳಿಗೆ ಪೂರಕವಾದ ಬಜೆಟ್ ನೀಡಿದ್ದೇವೆ – ಎಂ.ಬಿ ಪಾಟೀಲ್
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಸ್ತೆ ಅಪಘಾತವಾದ ಮೇಲೆ ಇದು ನನ್ನ ಮೊದಲ ಕಾರ್ಯಕ್ರಮ. ವೇದಿಕೆಯಲ್ಲಿರುವ ಸೌಮ್ಯ ರೆಡ್ಡಿ 16 ವೋಟಿನಲ್ಲಿ ಸೋತಿದ್ದರು. ಅವಳದ್ದೇ ತಪ್ಪನಿಂದ ಸೋತಿದ್ದಳು. ಆದರೆ ನನ್ನ ಪಾಲಿಗೆ ಆವಳು ಶಾಸಕಿನೇ. ನಾನು ಹುಟ್ಟಿದ್ದು 1975ರಲ್ಲಿ, ನನಗೆ 50 ವರ್ಷ, ಆದರೆ ನಾನು ಹಾಗೆ ಕಾಣಿಸುತ್ತೀನಾ? ವಯಸ್ಸು ಮುಖ್ಯ ಅಲ್ಲ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
‘ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಹಕ್ಕುಗಳು, ಸಮಾನತೆ ಹಾಗೂ ಸಬಲೀಕರಣಕ್ಕಾಗಿ- ತ್ವರಿತ ಕ್ರಮ’ ಘೋಷವಾಕ್ಯದಡಿ ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ… pic.twitter.com/UZwcTGmk9z
— Laxmi Hebbalkar (@laxmi_hebbalkar) March 8, 2025
ರಾಜಕಾರಣದಲ್ಲಿ ಇಂದಿರಾಗಾಂಧಿ ಮಹಿಳೆಯರ ಶಕ್ತಿಯ ಪ್ರತೀಕವಾಗಿದ್ದರು. ವಾಜಪೇಯಿಯವರೇ ಸ್ವತಃ ತಾವೇ ಇಂದಿರಾಗಾಂಧಿಯನ್ನು ದುರ್ಗಾಮಾತೆ ಎಂದಿದ್ದರು. ನಾನು ಕಿತ್ತೂರು ರಾಣಿ ಚೆನ್ನಮ್ಮನ ವಂಶಸ್ಥಳು. ನನಗೆ ಬಹಳ ಹೆಮ್ಮೆ ಇದೆ. ನಾನು ಕಲಿತದ್ದು ಕಡಿಮೆಯಾಗಿರಬಹುದು, ಆದರೆ ಅನುಭವ ಪಾಠ ನನಗೆ ತುಂಬಾ ಕಲಿಸಿದೆ ಎಂದರು.ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದ ತ.ನಾಡು ಸಿಎಂ ಸ್ಟಾಲಿನ್ ಪತ್ನಿ