LatestMain PostNational

ನಾನು ’24 ಕ್ಯಾರೆಟ್ ಕಾಂಗ್ರೆಸ್ಸಿಗ’, ಪಕ್ಷದೊಂದಿಗೆ ಯಾವುದೇ ಅಸಮಾಧಾನವಿಲ್ಲ: ಗುಲಾಂ ನಬಿ ಆಜಾದ್

- ಜನರನ್ನು ವಿಭಜಿಸುವ ಮೂಲಕ ಸೈತಾನನ ಕೆಲಸವನ್ನು ಮಾಡುತ್ತಾರೆ

ಶ್ರೀನಗರ: ನಾನು ’24 ಕ್ಯಾರೆಟ್ ಕಾಂಗ್ರೆಸ್ಸಿಗ’, ನಮ್ಮ ಪಕ್ಷದೊಂದಿಗೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳುವ ಮೂಲಕ ಎಲ್ಲ ಊಹಾಪೋಹಗಳಿಗೆ ಇಂದು ತೆರೆ ಎಳೆದಿದ್ದಾರೆ.

ಪಂಜಾಬ್‍ನ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರಂತೆ ನೀವು ಸಹ ಪಕ್ಷದಿಂದ ಹೊರಬರುವ ಸಾಧ್ಯತೆ ಇದೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ’24 ಕ್ಯಾರೆಟ್ ಕಾಂಗ್ರೆಸ್ಸಿಗರು’ ಪಕ್ಷ ಮತ್ತು ನಮ್ಮ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಅಸಮಾಧಾನವಿಲ್ಲ. ಬದಲಿಗೆ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ:  ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

ಹೌದು, ನಾನು ಕಾಂಗ್ರೆಸ್ಸಿಗ. ನಾನು ಕಾಂಗ್ರೆಸ್ಸಿಗ ಅಲ್ಲ ಎಂದು ನಿಮಗೆ ಯಾರು ಹೇಳಿದರು? 24 ‘ಕ್ಯಾರೆಟ್’ ಕಾಂಗ್ರೆಸ್ಸಿಗ. 18 ಕ್ಯಾರೆಟ್ 24 ಕ್ಯಾರೆಟ್‍ಗೆ ಸವಾಲು ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು. ವಿಭಜಿಸುವ ಪಕ್ಷಗಳು ವಿಭಜನೆಯನ್ನು ಮಾತ್ರ ನೋಡುತ್ತವೆ. ನಾವು ಜನರನ್ನು ಜೋಡಿಸುವವರು. ನಾವು ಏಕೀಕರಣಕ್ಕಾಗಿ ಏಕತೆಯನ್ನು ಬೆಸೆಯುತ್ತೇವೆ ಎಂದರು.

ಸುಧಾರಣೆಗಳ ಕರೆ ಕುರಿತು ಮಾತನಾಡಿದ ಅವರು, ಪ್ರತಿ ಪಕ್ಷ, ಪ್ರತಿ ಸಮಾಜ ಮತ್ತು ದೇಶದಲ್ಲಿ ಸುಧಾರಣೆಗಳ ಅಗತ್ಯವಿದೆ. ಸುಧಾರಣೆಗಳು ಪ್ರತಿ ಪಕ್ಷದಲ್ಲಿ ನಿರಂತರ ಪ್ರಕ್ರಿಯೆ ಮತ್ತು ಅವಶ್ಯಕವಾಗಿದೆ. ಸುಧಾರಣೆಗಳಿಂದಾಗಿ ಹಿಂದಿನ ಅನೇಕ ದುಷ್ಪರಿಣಾಮಗಳು ಇಂದು ಸಮಾಜದಲ್ಲಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: 40 ವರ್ಷ ಮೇಲ್ಪಟ್ಟ ಮಹಿಳೆಯರು ಮೋದಿಯಿಂದ ಪ್ರಭಾವಿತರಾಗಿದ್ದಾರೆಯೇ ಹೊರತು ಜೀನ್ಸ್ ತೊಟ್ಟ ಹುಡುಗಿಯರಲ್ಲ: ದಿಗ್ವಿಜಯ್ ಸಿಂಗ್

ರಾಜಕಾರಣಿಗಳು ಜನರ ಕಲ್ಯಾಣಕ್ಕಾಗಿ ಸರಿಯಾದ ಕೆಲಸಗಳನ್ನು ಮಾಡಬೇಕಾಗಿತ್ತು. ಆದರೆ ಕೆಲವೊಮ್ಮೆ ಅವರು ಜನರನ್ನು ವಿಭಜಿಸುವ ಮೂಲಕ ಸೈತಾನನ ಕೆಲಸವನ್ನು ಮಾಡುತ್ತಾರೆ ಎಂದು ನಾನು ಈಗಾಗಲೇ ಹೇಳಿದ್ದೇನೆ ಎಂದು ಕಿಡಿಕಾರಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಭವಿಷ್ಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಯಜಮಾನರು. ಯಾವುದೇ ಪಕ್ಷದ ಸೋಲು ಮತ್ತು ಗೆಲುವು ಅವರ ಕೈಯಲ್ಲಿದೆ. ಈ ಹಿನ್ನೆಲೆ ಪ್ರಸ್ತುತ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಿಂದಾಗಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಜನರು ಬಿಜೆಪಿಯಿಂದ ಬೇಸತ್ತಿದ್ದಾರೆ ಎಂದು ಹೇಳಿದರು.

Leave a Reply

Your email address will not be published.

Back to top button