ನವದೆಹಲಿ: ವಿಮಾನದಲ್ಲಿ ಸೀಟಿನ ಮುಂಭಾಗ ಇಟ್ಟಿದ್ದ ನೀರನ್ನು ಕುಡಿದು ಅಸ್ವಸ್ಥರಾದ ಕಾರಣ ಕರ್ನಾಟಕದ ರಣಜಿ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಬಿಗ್ಸ್ ಅಪ್ಡೇಟ್ ಹೊರಬಿದ್ದಿದೆ.
Advertisement
ಅಗರ್ತಲಾ ಐಎಲ್‌ಎಸ್ ಆಸ್ಪತ್ರೆ (ILS Hospital) ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಮಯಾಂಕ್ ಅಗರ್ವಾಲ್, ಸದ್ಯ ವೈದ್ಯಕೀಯವಾಗಿ ಸ್ಥಿರವಾಗಿದ್ದಾರೆ. ಅವರನ್ನು ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಗುಂಡಿನ ಸುರಿಮಳೆ – ಇಬ್ಬರು ಸಾವು, ಓರ್ವ BJP ಮುಖಂಡನಿಗೆ ಗಂಭೀರ ಗಾಯ
Advertisement
Advertisement
ಮಯಾಂಕ್‌ಗೆ ಏನಾಗಿತ್ತು?
ಕರ್ನಾಟಕ ರಣಜಿ ತಂಡದೊಂದಿಗೆ ತ್ರಿಪುರಾದ ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ಅಗರ್ವಾಲ್ ಪ್ರಯಾಣ ಬೆಳೆಸಿದ್ದರು. ವಿಮಾನದಲ್ಲಿ ಕುಳಿತಿದ್ದ ಮಯಾಂಕ್, ಸೀಟಿನ ಮುಂಭಾಗದಲ್ಲಿ ಇಟ್ಟಿದ್ದ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದರು.
Advertisement
ನೀರು ಕುಡಿಯುತ್ತಿದ್ದಂತೆ ಮಯಾಂಕ್ ನಾಲಿಗೆ, ಬಾಯಿಗೆ ಸುಟ್ಟ ಅನುಭವವಾಗಿದೆ. ಪರಿಣಾಮ ಅವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ತ್ರಿಪುರಾ ವಿರುದ್ಧ ಸೋಮವಾರ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿತ್ತು. ಮುಂದಿನ ಪಂದ್ಯಕ್ಕಾಗಿ ಸೂರತ್‌ಗೆ ಮಯಾಂಕ್ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: Loksabha Election: ಬೆಂಗಳೂರಿನಲ್ಲಿ ಕಣಕ್ಕೆ ಇಳಿಯುತ್ತಾರಾ ಸುಮಲತಾ ಅಂಬರೀಶ್?