ಪತ್ನಿಯ ಜೊತೆಗೆ ಸಂಬಂಧ – ಐಪಿಎಸ್‌ ಅರುಣ್‌ ರಂಗರಾಜ್‌ ವಿರುದ್ಧ ಹೆಡ್‌ಕಾನ್‌ಸ್ಟೇಬಲ್‌ ದೂರು

Public TV
1 Min Read
ips officer arun rangarajan

ಕಲಬುರಗಿ: ಈ ಹಿಂದೆ ಕೌಟುಂಬಿಕ ಕಾರಣಗಳಿಂದ ಸುದ್ದಿಯಾಗಿದ್ದ ಐಪಿಎಸ್ (IPS) ಅಧಿಕಾರಿ ಅರುಣ್ ರಂಗರಾಜನ್ (Arun Rangarajan) ವಿರುದ್ಧ ಇದೀಗ ಮಹಿಳಾ ಎಎಸ್‍ಐ ಒಬ್ಬರ ಜೊತೆ ಅಕ್ರಮ ಸಂಬಂಧ (Illicit Relationship) ಹೊಂದಿರುವ ಆರೋಪ ಕೇಳಿಬಂದಿದೆ.

ಮಹಿಳಾ ಎಎಸ್‍ಐ ಪತಿಯೇ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಅಕ್ರಮ ಸಂಬಂಧ ಪ್ರಶ್ನೆ ಮಾಡಿರುವುದಕ್ಕೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಎಸ್‍ಪಿ ಮತ್ತು ಎಎಸ್‍ಐ ವಿರುದ್ಧ ದೂರು ನೀಡಿದ್ದಾರೆ.

ಸದ್ಯ ಕಲಬುರಗಿ ಐಎಸ್‍ಡಿ ವಿಭಾಗದ ಎಸ್‍ಪಿ ಆಗಿರುವ ಅರುಣ್ ರಂಗರಾಜನ್ ಅದೇ ಇಲಾಖೆಯಲ್ಲಿ ಎಎಸ್‍ಐ ಆಗಿರುವ ನನ್ನ ಪತ್ನಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ನೊಂದ ಪತಿ ಆರೋಪಿಸಿದ್ದಾರೆ.

ದೂರುದಾರ ಪತಿ ಕೂಡ ಪೊಲೀಸ್ ಇಲಾಖೆಯಲ್ಲಿಯೇ ಹೆಡ್ ಕಾನ್‌ಸ್ಟೇಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ದಂಪತಿ ಪ್ರೀತಿಸಿ ಮದ್ವೆಯಾಗಿದ್ದರು. ಇಬ್ಬರು ಮಕ್ಕಳು ಕೂಡ ಇವೆ.

ಈ ಬಗ್ಗೆ ಉದ್ಧಟತನದಿಂದ ಎಸ್‍ಪಿ ಅರುಣ್ ರಂಗರಾಜನ್ ಪ್ರತಿಕ್ರಿಯೆ ನೀಡಿದ್ದಾರೆ. ಯಾರ ಹೆಂಡತಿಯನ್ನು ಯಾರು ಕೂಡ ಕೂಡಿ ಹಾಕಲು ಸಾಧ್ಯವಿಲ್ಲ. ತನ್ನ ಹೆಂಡತಿಯನ್ನು ಮನೆಯಲ್ಲಿಟ್ಟುಕೊಳ್ಳುವುದು ಒಬ್ಬ ಗಂಡನ ಜವಾಬ್ದಾರಿ. ಅದನ್ನು ಅವನು ಇಟ್ಟುಕೊಂಡಿಲ್ಲ ಅಂದ್ರೆ ಅವಳು ಎಲ್ಲಿ ಬೇಕೋ ಅಲ್ಲಿ ಸೇರುತ್ತಾಳೆ ಎಂದು ಮಾತನಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *