-ಆರು ತಿಂಗಳ ಕಂದಮ್ಮನ ಮುಂದೆಯೇ ಅಮ್ಮನ ಕೊಲೆ
-ಅಪ್ಪ ಅಮ್ಮ ಇಲ್ಲದೆ ಅನಾಥವಾದವು ಎಳೆ ಕಂದಮ್ಮಗಳು
ಚಿಕ್ಕಮಗಳೂರು: ಫೆಬ್ರವರಿ 17, 2020. ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ಬಾಣಂತಿಯನ್ನ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಇಟ್ಕೊಂಡವಳ ಮೋಹದ ಪಾಶಕ್ಕೆ ಸಿಕ್ಕ ಡಾಕ್ಟರ್ ಪತಿ, ಹೆಂಡತಿಯನ್ನೇ ಕೊಂದು ಇಬ್ಬರು ಮಕ್ಕಳನ್ನು ಅನಾಥರಾಗಿಸಿದ್ದಾನೆ. ಪೊಲೀಸ್ ತನಿಖೆಗೆ ಹೆದರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement
ಡಾ.ರೇವಂತ್ ಪರ ಸ್ತ್ರೀ ವ್ಯಾಮೋಹಕ್ಕ ಸಿಲುಕಿ ಪತ್ನಿ ಕವಿತಾಳನ್ನು ಕೊಲೆ ಮಾಡಿದ್ದನು. ಕೊಲೆಯ ಬಳಿಕ ಪೊಲೀಸ್ ತನಿಖೆಗೆ ಹೆದರಿದ ರೇವಂತ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನು. ದಂತವೈದ್ಯನಾಗಿರುವ ರೇವಂತ್ ಪರ ಸ್ತ್ರೀ ಜೊತೆ ಅಕ್ರಮ ಸಂಬಂಧವಿತ್ತು. ಈ ಬಗ್ಗೆ ಪತ್ನಿ ಕವಿತಾ ಹಲವು ಬಾರಿ ಬುದ್ಧಿ ಹೇಳಿದ್ದರೂ ಈ ಡಾಕ್ಟರ್ ತನ್ನ ಚಾಳಿ ಬಿಟ್ಟಿರಲಿಲ್ಲ. ಆದರೂ ಹೆಂಡತಿ ಮಾತು ಕೇಳದ ಈತ ಇಟ್ಕೊಂಡವಳ ಮೋಹ ಪಾಶದಲ್ಲಿ ಮುಂದುವರಿದಿದ್ದಾನೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಗ ಹೆಂಡತಿಯನ್ನೇ ಮುಗಿಸೋ ನಿರ್ಧಾರಕ್ಕೆ ಬಂದಿದ್ದನು.
Advertisement
Advertisement
ಫೆಬ್ರವರಿ 17ರಂದು ಏನಾಯ್ತು?
ಐದು ದಿನಗಳ ಹಿಂದೆಯೇ ಕೊಲೆಗೆ ಸ್ಕೆಚ್ ಹಾಕಿದ್ದ ಡಾಕ್ಟರ್ ರೇವಂತ್ ಫೆಬ್ರವರಿ 17ರಂದು ರೇವಂತ್ ಪತ್ನಿ ಕವಿತಾಗೆ ಒಡವೆ ಕೊಡಿಸಿದ್ದಾರೆ. ಮನೆಗೆ ಬಂದ ಕೂಡಲೇ ಕವಿತಾ ಬಾಯಿಗೆ ಬಟ್ಟೆ ತುರುಕಿ ಹೊಟ್ಟೆ ಭಾಗಕ್ಕೆ ಇಂಜೆಕ್ಷನ್ ಕೊಟ್ಟಿದ್ದಾನೆ. ಕವಿತಾ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿದ್ದಾರೆ. ಕವಿತಾಳನ್ನು ಕಾರ್ ಶೆಡ್ಡಿಗೆ ಎಳೆದೊಯ್ದಿದು ಆರು ತಿಂಗಳ ಮಗುವಿನ ಮುಂದೆಯೇ ಪತ್ನಿಯ ಕತ್ತು ಕೊಯ್ದಿದ್ದಾನೆ. ಕೊಲೆಯ ಬಳಿಕ ರಕ್ತ ಹರಿಯಬಾರದೆಂದು ಕವಿತಾ ಸುತ್ತ ಮ್ಯಾಟ್ ಹಾಕಿದ್ದಾನೆ. ಮನೆಯಲ್ಲಿಯೇ ಇದ್ದ 5 ವರ್ಷದ ಕಂದಮ್ಮ ಅಮ್ಮ ಎಂದು ಕೇಳಿದಾಗ ವಾಶ್ ರೂಂಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಕೊಲೆಯ ಬಳಿಕ ಮಕ್ಕಳನ್ನು ಕರೆದುಕೊಂಡು ಕ್ಲಿನಿಕ್ ಗೆ ಹೋಗಿದ್ದಾನೆ.
Advertisement
ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯಾರೋ ದುಷ್ಕರ್ಮಿಗಳು ಮನೆಗೆ ಬಂದು ಕೊಲೆ ಮಾಡಿ, ಚಿನ್ನಾಭರಣವನ್ನ ದೋಚಿ ಹೋಗಿದ್ದಾರೆ ಅಂತ ದೂರು ನೀಡಿ, ಎಲ್ಲರೆದರು ಮೊಸಳೆ ಕಣ್ಣೀರು ಸುರಿಸಿದ್ದ. ಆದರೆ ಕವಿತಾ ಮರಣೋತ್ತರ ವರದಿಯಲ್ಲಿ ದಂತವೈದ್ಯನ ಅಸಲಿ ಮುಖವನ್ನ ಬಯಲು ಮಾಡಿತ್ತು. ಕವಿತಾಳ ಕೊಲೆ ಮಾಡುವ ಮುನ್ನ ಆಕೆಗೆ ಇಂಜೆಕ್ಷನ್ ನೀಡಲಾಗಿತ್ತು ಅಂತ ವರದಿ ಹೇಳಿತ್ತು. ಇದರಿಂದ ಹೆದರಿದ ರೇವಂತ್, ಕಡೂರಿನ ಮಸಾಲ ಡಾಬಾದ ಸಮೀಪ ಕಾರು ನಿಲ್ಲಿಸಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದುರಂತ ಅಂದರೆ 6 ತಿಂಗಳ ಹಸುಗೂಸು, 5 ವರ್ಷದ ಮಗು ಇದೀಗ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.