ಬೆಂಗಳೂರು: ಮನೆ ಕೆಲಸದವಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಪತ್ನಿಯೇ (Wife) ಪತಿಯನ್ನು ಕೊಲೆ ಮಾಡಿದ ಘಟನೆ ಸುದ್ದಗುಂಟೆ ಪಾಳ್ಯದಲ್ಲಿ ನಡೆದಿದೆ.
ಭಾಸ್ಕರ್(41) ಕೊಲೆಯಾದ ವ್ಯಕ್ತಿ. ಭಾಸ್ಕರ್ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ (Software Company) ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಶ್ರುತಿ ಪತಿಯನ್ನು ಕೊಲೆ ಮಾಡಿದ್ದು ಪೊಲೀಸರು ಈಗ ಬಂಧಿಸಿದ್ದಾರೆ.
ಮನೆಗೆಲಸದವಳ ಜೊತೆ ಭಾಸ್ಕರ್ ಹೆಚ್ಚು ಸಲುಗೆಯಿಂದ ಇದ್ದರು. ಈ ಕಾರಣಕ್ಕೆ ಸಾಕಷ್ಟು ಬಾರಿ ಗಂಡ- ಹೆಂಡತಿ ನಡುವೆ ಕಲಹ ಉಂಟಾಗಿತ್ತು. ಎರಡು ದಿನದ ಹಿಂದೆ ರಾತ್ರಿ ಇದೇ ಕಾರಣಕ್ಕೆ ಗಲಾಟೆ ಶುರುವಾಗಿತ್ತು. ಗಲಾಟೆ ವೇಳೆ ಗಂಡನ ಮುಖಕ್ಕೆ ಬಲವಾಗಿ ಶ್ರುತಿ ಹೊಡೆದಿದ್ದಳು. ಇದರಿಂದ ಸ್ಥಳದಲ್ಲಿಯೇ ಭಾಸ್ಕರ್ ಮೃತಪಟ್ಟಿದ್ದರು. ಇದನ್ನೂ ಓದಿ: ಉಡುಪಿ | `ರಕ್ತಕ್ಕೆ ರಕ್ತವೇ ಬೇಕು’ ಅಂತ ಸ್ಟೇಟಸ್ ಹಾಕಿದ್ದ ಯುವಕ ಅರೆಸ್ಟ್
ಗಂಡನ ಕೊಂದು ಪೊಲೀಸರ ಮುಂದೆ ಶ್ರುತಿ ಕಥೆ ಕಟ್ಟಿದ್ದಳು. ಗಂಡ ಕುಡಿದು ಬಂದು ಬಾತ್ ರೂಮಿನಲ್ಲಿ ಬಿದ್ದು ಗಾಯಗೊಂಡಿದ್ದರು. ನಾನು ಅವರಿಗೆ ಸ್ನಾನ ಮಾಡಿಸಿ ಮಲಗಿಸಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದಳು.
ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಎಸ್‌ಜಿ ಪಾಳ್ಯ ಪೊಲೀಸರು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ (Post ortem Report) ಮುಖಕ್ಕೆ ಮತ್ತು ದೇಹಕ್ಕೆ ಯಾವುದೋ ವಸ್ತುವಿನಿಂದ ಹೊಡೆದಿರುವ ವಿಚಾರ ಬೆಳಕಿಗೆ ಬಂದಿತ್ತು. ಅನುಮಾನ ಬಂದ ಹಿನ್ನೆಲೆಯಲ್ಲಿ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶ್ರುತಿ ಕೊಲೆ ನಡೆಸಿದ್ದನ್ನು ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ರಸ್ತೆಬದಿ ನಡೆದುಕೊಂಡು ಹೋಗ್ತಿದ್ದ 10ರ ಬಾಲಕನ ಮೇಲೆ ಹರಿದ ಕಾರು – ಸ್ಥಳದಲ್ಲೇ ಸಾವು
ಮೊದಲನೇ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದ ಭಾಸ್ಕರ್ ಶ್ರುತಿಯನ್ನು ಮದುವೆಯಾಗಿದ್ದರು. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಮನೆ ಕೆಲಸದವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಶ್ರುತಿ ಕೋಪಕ್ಕೆ ಕಾರಣವಾಗಿತ್ತು. ಸಂಬಳ ಅಲ್ಲದೇ ಮನೆ ಬಾಡಿಗೆಯಿಂದಲೇ ತಿಂಗಳಿಗೆ 1.15 ಲಕ್ಷ ರೂ. ಆದಾಯ ಬರುತ್ತಿತ್ತು. ಬಂದ ಹಣವನ್ನು ಭಾಸ್ಕರ್ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ನೀಡುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಭಾಸ್ಕರ್ ನಿವಾಸಕ್ಕೆ ಬಾರದೇ ಸ್ನೇಹಿತೆಯ ಮನೆಯಲ್ಲೇ ಇರುತ್ತಿದ್ದರು. ಎರಡು ದಿನದ ಹಿಂದೆ ಮನೆಗೆ ಬಂದಾಗ ಪತ್ನಿ ಶ್ರುತಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಗೆ ತಿರುಗಿ ಶ್ರುತಿ ಪತಿಯನ್ನೇ ಹತ್ಯೆ ಮಾಡಿದ್ದಾಳೆ.