ಬೀದರ್: ಜಿಲ್ಲೆಯ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ 16 ಲಕ್ಷ ಮೌಲ್ಯದ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಬಸವಕಲ್ಯಾಣ ತಾಲೂಕಿನ ಸಸ್ತಾಪೂರ್ ಬಂಗ್ಲಾ ಬಳಿ ನಡೆದಿದೆ.
ಆರೋಪಿಯನ್ನು ತೆಲಂಗಾಣ ಮೂಲದ ಪಿ.ಕೆ ಭದ್ರುಧಿನ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕಾಲಿಗೆ ಕೋಳ, ಪ್ರತಿನಿತ್ಯ ಚಿತ್ರಹಿಂಸೆ – ಜೀತ ಪದ್ಧತಿಯ ಪ್ರತ್ಯಕ್ಷ ವರದಿ; ʻಪಬ್ಲಿಕ್ʼ ವರದಿ ಬೆನ್ನಲ್ಲೇ ಕಾರ್ಮಿಕರ ರಕ್ಷಣೆ!
ಗೂಡ್ಸ್ ವಾಹನದಲ್ಲಿ ಶ್ರೀಗಂಧವನ್ನು ಅಕ್ರಮವಾಗಿ ನೆರೆಯ ತೆಲಂಗಾಣದಿಂದ ಮಹಾರಾಷ್ಟ್ರದ ಮುಂಬೈ ನಗರಕ್ಕೆ ಸಾಗಾಟ ಮಾಡುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿದ್ದು, ಬರೋಬ್ಬರಿ 16 ಲಕ್ಷ ಮೌಲ್ಯದ ಒಂದು ಕ್ವಿಂಟಾಲ್ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಬಸವಕಲ್ಯಾಣ ನಗರ ಠಾಣೆಯ ಪಿಎಸ್‌ಐ ಅಂಬರೀಶ್ ಹಾಗೂ ಅರಣ್ಯಾಧಿಕಾರಿ ಮಹೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ರಕ್ತ ಚಂದನದ ಜೊತೆಗೆ ಅಕ್ರಮವಾಗಿ ಶ್ರೀಗಂಧ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದು, ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಇರ್ತಾರೋ ಇರಲ್ವೋ ಗೊತ್ತಿಲ್ಲ: ಸಿಎಂ ಆಪ್ತ ಸಲಹೆಗಾರ ಬಿಆರ್ ಪಾಟೀಲ್ ಹೊಸ ಬಾಂಬ್