ಗ್ಯಾಂಗ್‌ಸ್ಟಾರ್‌ ವಿರುದ್ಧ ಜೆಸಿಬಿ ಘರ್ಜನೆ – 4 ಕೋಟಿ ಮೌಲ್ಯದ 4 ಮಹಡಿಯ ಮನೆ ನೆಲಸಮ

Advertisements

ಚಂಡೀಗಢ: ಉತ್ತರ ಪ್ರದೇಶ ಬಳಿಕ ಈಗ ಹರ್ಯಾಣದಲ್ಲೂ(Haryana) ಗ್ಯಾಂಗ್‌ಸ್ಟಾರ್‌(Gangster) ವಿರುದ್ಧ ಜೆಸಿಬಿ ಕಾರ್ಯಾಚರಣೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಗ್ಯಾಂಗ್‌ಸ್ಟಾರ್‌ ಅಕ್ರಮವಾಗಿ ನಿರ್ಮಿಸಿದ್ದ 4 ಕೋಟಿ ರೂ. ಮೌಲ್ಯದ ಮನೆಯನ್ನು ನೆಲಸಮ ಮಾಡಲಾಗಿದೆ.

Advertisements

ಕ್ರಿಮಿನಲ್‌ ಪ್ರಕರಣದಲ್ಲಿ ದೋಷಿಯಾಗಿರುವ ಸುಬೆ ಸಿಂಗ್(Sube Singh Gujjar) ಮನೇಸರ್‌ನ ಬಾರ್ ಗುಜ್ಜರ್ ಗ್ರಾಮದಲ್ಲಿ ನಿರ್ಮಿಸಿದ್ದ 4 ಅಂತಸ್ತಿನ ಮನೆಯನ್ನು ಸರ್ಕಾರದ ಸೂಚನೆಯ ಮೇರೆಗೆ ಕೆಡವಲಾಗಿದೆ.

ದರೋಡೆಕೋರರ ಅಕ್ರಮ ಆಸ್ತಿಯನ್ನು ನೆಲಸಮಗೊಳಿಸುವ ಕಾರ್ಯಾಚರಣೆಯ ಮೊದಲ ಭಾಗವಾಗಿ ಮನೆಯನ್ನು ನೆಲಸಮ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisements

ಮನೆಮಾಲೀಕ ಸುಬೆ ಸಿಂಗ್ ಗುಜ್ಜರ್ ಪ್ರಸ್ತುತ ಭೋಂಡ್ಸಿ ಜೈಲಿನಲ್ಲಿದ್ದಾನೆ. ಗುರುವಾರ ಸಂಜೆ 5 ಗಂಟೆಗೆ ಮನೇಸರ್‌ನ ಸಹಾಯಕ ಪೊಲೀಸ್ ಆಯುಕ್ತ ಸುರೇಶ್ ಕುಮಾರ್ ಸೇರಿದಂತೆ 50 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಎರಡು ಜೆಸಿಬಿ ಬಳಸಿ ಮನೆಯನ್ನು ಕೆಡವಲಾಗಿದೆ. ಇದನ್ನೂ ಓದಿ: ಹೋಟೆಲ್‍ನಲ್ಲಿ ಬೇರೊಬ್ಬಳ ಜೊತೆಗೆ ಚಕ್ಕಂದ – ರೆಡ್‍ಹ್ಯಾಂಡ್ ಆಗಿ ಸಿಕ್ಕ ಪತಿಗೆ ಚಪ್ಪಲಿಯಿಂದ ಗ್ರಹಚಾರ ಬಿಡಿಸಿದ್ಲು

ದರೋಡೆಕೋರ ಕೌಶಲ್‌ನ ಆಪ್ತ ಸಹಾಯಕನಾಗಿದ್ದ ಗುಜ್ಜರ್ ಮೇಲೆ ಕೊಲೆ, ಕೊಲೆ ಯತ್ನ ಮತ್ತು ಸುಲಿಗೆ ಸೇರಿದಂತೆ 42 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 7.60 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು.

Advertisements

ಪೊಲೀಸ್ ಸಹಾಯಕ ಕಮಿಷನರ್ ಪ್ರೀತ್ ಪಾಲ್ ಸಾಂಗ್ವಾನ್ ಪ್ರತಿಕ್ರಿಯಿಸಿ, ಸುಬೆ ಸಿಂಗ್ ಕಳೆದ 20 ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ. ತನ್ನ ಸಹಚರರನ್ನು ಕಳುಹಿಸಿ ಆಸ್ತಿ ಮಾಲೀಕರನ್ನು ಬೆದರಿಸಿ ಅವರನ್ನು ಅಲ್ಲಿಂದ ಓಡಿಸುತ್ತಿದ್ದ. ಬಳಿಕ ಆ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳುತ್ತಿದ್ದ. ದರೋಡೆಕೋರನ ಕುಟುಂಬವು ಕಟ್ಟಡದಲ್ಲಿ ವಾಸಿಸುತಿತ್ತು ಎಂದು ತಿಳಿಸಿದರು.

 

ಗುಜ್ಜರ್‌ನನ್ನು ಏಪ್ರಿಲ್ 2018 ರಲ್ಲಿ ಜಿಲ್ಲಾ ನ್ಯಾಯಾಲಯವು ಅಪರಾಧಿ ಎಂದು ಪ್ರಕಟಿಸಿದೆ. ಮಾನೇಸರ್ ಬಳಿಯ ಗುಜ್ಜರ್‌ ಗ್ರಾಮದಲ್ಲಿ ಸುಬೆ ಸಿಂಗ್ ಸೇರಿದ್ದ 1.3 ಎಕರೆ ಮತ್ತು ಮನೇಸರ್ ಕೈಗಾರಿಕಾ ಪ್ರದೇಶದಲ್ಲಿರುವ 0.8 ಎಕರೆ ಜಾಗವನ್ನು ಜಿಲ್ಲಾಡಳಿತ 2019 ಮತ್ತು 2021ರಲ್ಲಿ ಹರಾಜು ನಡೆಸಲು ಸಿದ್ಧತೆ ನಡೆಸಿತ್ತು. ಆದರೆ ಈ ಭೂಮಿಯನ್ನು ಖರೀದಿ ಮಾಡಲು ಯಾರು ಆಸಕ್ತಿ ತೋರಿಸಿರಲಿಲ್ಲ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

2016 ರಲ್ಲಿ ಗುರುಗ್ರಾಮದಿಂದ ಪರಾರಿಯಾಗಿದ್ದ ಗುಜ್ಜರ್‌ ನೇಪಾಳದಲ್ಲಿ 18 ತಿಂಗಳ ಕಾಲ ನೆಲೆಸಿ ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದ. ವ್ಯಾಪಾರಿಗಳು, ಆಭರಣ ಮಾಲೀಕರು, ಸಿಹಿ ಅಂಗಡಿ ಮತ್ತು ಬೇಕರಿ ಮಾಲೀಕರು ಮತ್ತು ಕೈಗಾರಿಕೋದ್ಯಮಿಗಳಿಂದ ಹಣವನ್ನು ಸುಲಿಗೆ ಮಾಡುತ್ತಿದ್ದ.

Live Tv

Advertisements
Exit mobile version