ಮಂಡ್ಯ: ನಿರ್ಮಿತಿ ಕೇಂದ್ರ ಸರ್ಕಾರಿ ಹಾಗೂ ಸಂಘ-ಸಂಸ್ಥೆಗಳ ಕಟ್ಟಡಗಳನ್ನು ಅಂದ್ರೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದಲ್ಲಿ ಕಟ್ಟಿಕೊಡುವ ಒಂದು ಇಲಾಖೆ ಆಗಿದೆ. ಆದ್ರೆ ಮಂಡ್ಯದ ನಿರ್ಮಿತಿ ಕೇಂದ್ರದಲ್ಲಿ (Mandya Nirmithi Kendra) ಮಾತ್ರ ಇದ್ದಕ್ಕೆ ತದ್ವಿರುದ್ಧವಾಗಿ ಕೆಲಸಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಹೌದು. ಮಂಡ್ಯದ ನಿರ್ಮಿತಿ ಕೇಂದ್ರ ಕಳೆದ ಹಲವು ತಿಂಗಳಿನಿಂದ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿ ಇದೆ. ಕೆಲ ದಿನಗಳ ಹಿಂದೆಯಷ್ಟೇ ಇಬ್ಬರು ಸಿಬ್ಬಂದಿ ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಇಲ್ಲಿನ ಅಧಿಕಾರಿಗಳು ನಕಲಿ ಬಿಲ್ (Duplicate Bill) ಸೃಷ್ಟಿ ಮಾಡಿರುವುದರ ಜೊತೆಗೆ ನಕಲಿ ಕಾಮಗಾರಿಗೆ ಕೋಟಿ ಕೋಟಿ ಮುಗಂಡ ಹಣ ಬಿಡುಗಡೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ವಾರಣಾಸಿ ಗ್ಯಾಂಗ್ ರೇಪ್ – ಏರ್‌ಪೋರ್ಟಲ್ಲೇ ಪೊಲೀಸರಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ
ಮಂಡ್ಯ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ (Nirmithi Kendra MD) ನರೇಶ್ ಅವರ ಅವಧಿಯಲ್ಲಿ ಈ ಅಕ್ರಮಗಳು ಜರುಗಿವೆ ಎಂದು ಆರ್‌ಟಿಐ ಕಾರ್ಯಕರ್ತ ಮಧು ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕಾಮಗಾರಿಯನ್ನು ಆರಂಭಿಸಿದ ಬಳಿಕ ಮುಗಂಡ ಹಣವನ್ನು ಪಡೆದುಕೊಳ್ಳಬೇಕು. ಆದರೆ ಮದ್ದೂರಿನ ಹರಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡ ಕಾಮಗಾರಿಯನ್ನು ಆರಂಭಿಸದೇ ಹಣ ಬಿಡುಗಡೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಶಾಸಕ ಯತ್ನಾಳ್ ಕೊಲೆಗೆ ಸಂಚು? – ಅನ್ಯಕೋಮಿನ ಯುವಕನ ಸ್ಫೋಟಕ ಆಡಿಯೋ ವೈರಲ್
ಇಷ್ಟೇ ಅಲ್ಲ ಇಲ್ಲಿ ಅಧಿಕಾರಿಗಳು ನಿರ್ಮಿತಿ ಕೇಂದ್ರದ ಸುನೀಲ್ ಎಂಬ ಸಿಬ್ಬಂದಿ ಹೆಸರಿನಲ್ಲಿ 1,09,610 ರೂ. ಬಿಲ್ ಸೃಷ್ಠಿ ಮಾಡಿರುವ ವಿಚಾರವೂ ಬೆಳಕಿಗೆ ಬಂದಿದೆ. ಇನ್ನೂ ಮಂಡ್ಯ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಐಟಿಐ ಕಾಲೇಜುಗಳ ವರ್ಕ್ ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್‌ಗಳ ಕಾಮಗಾರಿ ಸಿಎಸ್ಆರ್ ಅನುದಾನದ ಅಡಿ ಆರಂಭಗೊಂಡಿತ್ತು. ಆದರೆ ನಿರ್ಮಿತಿ ಕೇಂದ್ರ ಅಧಿಕಾರಿಗಳು ನಕಲಿ ಬಿಲ್ ಸೃಷ್ಠಿ ಮಾಡಿ ಹಣ ಡ್ರಾ ಮಾಡಿಕೊಂಡಿದ್ದು, ಇಲ್ಲೂ ಕೋಟಿ ಕೋಟಿ ಭ್ರಷ್ಟಾಚಾರ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ:
ಈ ಪ್ರಕರಣಗಳ ಸಂಬಂಧ ಆರ್‌ಟಿಐ ಕಾರ್ಯಕರ್ತ ಲೋಕಾಯುಕ್ತಕ್ಕೆ (Lokayukta) ದಾಖಲೆ ಸಮೇತ ದೂರು ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಬಡ್ಡಿ ಸಮೇತ ಹಣ ವಸೂಲಿ ಮಾಡಬೇಕೆಂದು ಆಗ್ರಹಿಸಿದ್ದಾರೆ. ಲೋಕಾಯುಕ್ತ ಮುಂದೆ ಯಾವ ಕ್ರಮವನ್ನು ಅನುಸರಿಸುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಕಾಂಗ್ರೆಸ್ ಕಳ್ಳರು ದಲಿತರನ್ನು ತುಳಿದಿದ್ದಾರೆಯೇ ಹೊರತು ಉದ್ಧಾರ ಮಾಡಿಲ್ಲ: ಅಶೋಕ್