ಬೆಂಗಳೂರು: ಅಕ್ರಮ ಕಾಮಗಾರಿ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಗುತ್ತಿಗೆದಾರೊಬ್ಬರಿಗೆ ಅಧಿಕಾರಿಗಳು ಜೀವಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಕರ್ನಾಟಕ ಇನ್ಫ್ರಾಸ್ಟ್ರಕ್ಚರ್ ರೂರಲ್ ಡವಲಪ್ಮೆಂಟ್ ಇಲಾಖೆಯಲ್ಲಿ ಅಕ್ರಮ ಕಾಮಗಾರಿ ನಡೆದಿದೆ ಅಂತಾ ಗುತ್ತಿಗೆದಾರ ಮೋಹನ್ ಕುಮಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ವಿಚಾರ ತಿಳಿದ ಅಧಿಕಾರಿಗಳು ಮೋಹನ್ ಕುಮಾರ್ಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮಾಲ್ಡೀವ್ಸ್ನಿಂದ ಭಾರತೀಯ ಸೇನೆಯನ್ನ ಹಿಂತೆಗೆದುಕೊಳ್ಳಿ: ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಕರೆ
Advertisement
Advertisement
ಈ ಸಂಬಂಧ ಮೋಹನ್ ಕುಮಾರ್ ಕೋರ್ಟ್ನಲ್ಲಿ ಪಿಸಿಆರ್ ದಾಖಲಿಸಿದ್ದಾರೆ. ಕೋರ್ಟ್ ಸೂಚನೆ ಮೇರೆಗೆ ನಗರದ ಅನ್ನಪೋರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಇಲಾಖೆಯ ಏಳು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಬ್ಲೂ ಫ್ಲ್ಯಾಗ್ ಖ್ಯಾತಿಯ ಶುಭ್ರ, ಸುಂದರ ಉಡುಪಿಯ ಪಡುಬಿದ್ರೆ ಬೀಚ್!