ಕೋಲಾರ: ಮನುಷ್ಯ ಸೇರಿದಂತೆ ಪ್ರಾಣಿಗಳ ಮೂಳೆಯನ್ನು ಬಿಡದೆ ತಿಂದು ಹಾಕಬಲ್ಲ, ಪರಿಸರಕ್ಕೆ ಹಾಗೂ ಮನುಷ್ಯನ ಆರೋಗ್ಯಕ್ಕೂ ಮಾರಕವಾದ ಅಕ್ರಮವಾಗಿ ಕ್ಯಾಟ್‍ಫಿಶ್‍ನ್ನು ಕೋಲಾರದಲ್ಲಿ ಎಗ್ಗಿಲ್ಲದೆ ಸಾಗಾಣೆ ಮಾಡಲಾಗುತ್ತಿದೆ.
ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ನಾರಾಯಣಸ್ವಾಮಿ ಗ್ರಾಮದ ಬಳಿ ಬೃಹತ್ ಮಟ್ಟದಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡಲಾಗುತ್ತಿದೆ. ಆದರು ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಅಥವಾ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಾಗಲಿ ತಲೆ ಕೆಡಿಸಿಕೊಂಡಿಲ್ಲ.
Advertisement
Advertisement
ಈ ಕ್ಯಾಟ್ ಫಿಶ್ ಸಾಕಾಣಿಕೆ ಅಡ್ಡೆ ಗ್ರಾಮದ ಹೊರ ವಲಯದಲ್ಲಿ ತೋಟಗಳ ಮಧ್ಯೆ ನಡೆಯುತ್ತಿದ್ದು, ಕೆಲ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಕ್ಯಾಟ್ ಫಿಶ್‍ಗೆ ಹಾಕಲಾಗುವ ಆಹಾರ ಕೊಳೆತ ಕುರಿ, ಕೋಳಿ, ಹಂದಿ, ಮಾಂಸವನ್ನು ತಂದು ಹಾಕಲಾಗುತ್ತಿದೆ. ಇದರಿಂದ ಸುತ್ತಮುತ್ತಲ ಪರಿಸರ ಹಾಳಾಗುತ್ತಿರುವುದಲ್ಲದೆ ನಾಯಿ, ಹದ್ದುಗಳು ಈ ತ್ಯಾಜ್ಯಕ್ಕಾಗಿ ಇಲ್ಲಿಯೇ ಬೀಡು ಬಿಟ್ಟಿವೆ.
Advertisement
ಈ ತ್ಯಾಜ್ಯವನ್ನ ತಿಂದು ರುಚಿ ಕಂಡಿರುವ ನಾಯಿಗಳು ಮಕ್ಕಳ ಮೇಲೆ ಎರಗುವ ಆತಂಕ ಕೂಡ ಈ ಭಾಗದಲ್ಲಿದೆ. ಹಾಗಾಗಿ ಸಂಬಂಧ ಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv