-ದಂಧೆಕೋರರ ಚಳಿ ಬಿಡಿಸಿದ ಅಧಿಕಾರಿಗಳು
ಚಿಕ್ಕಬಳ್ಳಾಪುರ: ಇಷ್ಟು ದಿನ ರಾಜ್ಯ ರಾಜಧಾನಿಯಲ್ಲಿ ಸದ್ದು ಮಾಡ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಯ ಮಾಫಿಯಾ ಇದೀಗ ಚಿಕ್ಕಬಳ್ಳಾಪುರದತ್ತ ಮುಖ ಮಾಡಿದೆ. ಜಿಲ್ಲೆಯಲ್ಲಿ ರಾತ್ರೋ ರಾತ್ರಿ ಜಲ್ಲಿ ಕಲ್ಲು, ಗ್ರಾನೈಟ್ ದಿಮ್ಮಿಗಳು, ಕಲ್ಲಿನ ಬೋಲ್ಡರ್ಸ್ ಗಳನ್ನು ಬೃಹತ್ ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಇದನ್ನರಿತ ಚಿಕ್ಕಬಳ್ಳಾಪುರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ರಾನ್ ಜಿ ನಾಯಕ್ ಹಾಗೂ ಸಂದೀಪ್ ದಾಳಿ ನಡೆಸಿದ್ದಾರೆ.
ಯಲಗಲಹಳ್ಳಿ, ಚಿಕ್ಕನಾಗವಲ್ಲಿ ಗ್ರಾಮದ ಸುತ್ತಮುತ್ತಲಿನ ಕಲ್ಲು ಕ್ವಾರಿಗಳಲ್ಲಿನ ಟಿಪ್ಪರ್ ಲಾರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಂತರ ಅಧಿಕಾರಿಗಳ ಬೆನ್ನುಬಿದ್ದ ದಂಧೆಕೋರರು ಅಧಿಕಾರಿಗಳಿಗೆ ಭಯ ಹುಟ್ಟಿಸಿದ್ದಾರೆ. ನಾಲ್ಕೈದು ಕಾರು, ಬೈಕ್‍ಗಳಲ್ಲಿ ಅಧಿಕಾರಿಗಳನ್ನು ಹಿಂಬಾಲಿಸಿದ ಮಾಫಿಯಾ ಪಡೆ ಡಿಕ್ಕಿ ಹೊಡೆದು ಅಟ್ಯಾಕ್ ಮಾಡುವ ಹಾಗೆ ಚಮಕ್ ಕೊಟ್ಟಿದ್ದಾರೆ. ಆದ್ರೂ ಧೃತಿಗೆಡದ ಅಧಿಕಾರಿಗಳು ಯಲಗಲಹಳ್ಳಿ ಬಳಿ 8, ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದ್ರು. ಅತ್ತ ಸಾರಿಗೆ ಇಲಾಖೆಯ ಆರ್.ಟಿ.ಓ ನಾಗಿರೆಡ್ಡಿ ಸಹ ರಾಷ್ಟ್ರೀಯ ಹೆದ್ದಾರಿ 7ರ ಹೊನ್ನೇನಹಳಿ ಬಳಿ 5 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮೊರೆ ಹೋಗಿದ್ದಾರೆ.
Advertisement
Advertisement
ಈ ಘಟನೆ ನಂತರ ಮತ್ತಷ್ಟು ಚುರುಕಾಗಿರುವ ಡಿಸಿ ಅನಿರುದ್ ಶ್ರವಣ್, ಪ್ರತಿ ದಿನ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಅಕ್ರಮಗಳಿಗೆ ಕಡಿವಾಣ ಹಾಕಿ ಗಣಿ ಗ್ಯಾಂಗ್‍ಗೆ ಶಾಕ್ ನೀಡಿ ಅಂತ ಆದೇಶಿಸಿದ್ದಾರೆ. ಇದರಿಂದ ದಂಧೆಕೋರರು ಅನ್ಯ ಮಾರ್ಗಗಳತ್ತ ಮುಖ ಮಾಡ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv