ಹಾಸನ: ಅಕ್ರಮ ಮರಳು ದಾಸ್ತಾನು ಅಡ್ಡೆ ಮೇಲೆ ಎಸಿ, ತಹಶೀಲ್ದಾರ್ ಜಂಟಿ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು ಹತ್ತು ಲಾರಿ ಲೋಡ್‍ಗೂ ಅಧಿಕ ಪ್ರಮಾಣದ ಮರಳು ವಶಪಡಿಸಿಕೊಂಡಿದ್ದಾರೆ.
Advertisement
ಸಕಲೇಶಪುರ ತಾಲೂಕಿನ, ಚಿಕ್ಕಲ್ಲೂರು ಗ್ರಾಮದಲ್ಲಿ ಮರಳು ಸಂಗ್ರಹಿಸಿಡಲಾಗಿತ್ತು. ಪರವಾನಗಿ ಇಲ್ಲದೇ ಹೇಮಾವತಿ ನದಿಯಿಂದ ಮರಳು ಕದ್ದು ದಾಸ್ತಾನು ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಕಲೇಶಪುರ ಉಪವಿಭಾಗ ಅಧಿಕಾರಿ ಪ್ರತೀಕ್ ಬಯಾಲ್ ಹಾಗೂ ತಹಶೀಲ್ದಾರ್ ಜಯಕುಮಾರ್ ನೇತೃತ್ವದ ತಂಡ ಮರಳು ವಶಕ್ಕೆ ಪಡೆದಿದೆ. ಆದರೆ ಅಧಿಕಾರಿಗಳು ದಾಳಿ ಮಾಡಿ ಮರಳು ಪತ್ತೆ ಮಾಡಿದರೂ, ಖದೀಮರ ಸುಳಿವು ಪತ್ತೆಯಾಗಿಲ್ಲ. ಇದನ್ನೂ ಓದಿ:ಊಟ ಮಾಡ್ತಿದ್ದಾಗ ಏಕಾಏಕಿ ಬಿದ್ದ ಫ್ಯಾನ್- ಮನೆ ಮಂದಿ ಗ್ರೇಟ್ ಎಸ್ಕೇಪ್
Advertisement
Advertisement
ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನೂ ಈ ಭಾಗದಲ್ಲಿ ಅಕ್ರಮ ಮರಳು ಸಾಗಾಟದ ಆರೋಪ ಪದೇ ಪದೇ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಅಕ್ರಮ ಪತ್ತೆ ಹಚ್ಚಿದರೂ ಕೂಡ ಆರೋಪಿಗಳು ಮಾತ್ರ ಪರಾರಿಯಾಗಿದ್ದಾರೆ. ಇದನ್ನೂ ಓದಿ:ಯೋಗಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ – ಉದ್ದವ್ ವಿರುದ್ಧ ದೂರು
Advertisement