ರಾಯಚೂರು: ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್‍ನನ್ನ ಸುಮಾರು 20 ಕಿ.ಮೀ ಹಿಂಬಾಲಿಸಿ ರಾಯಚೂರಿನ ದೇವದುರ್ಗ ತಹಶೀಲ್ದಾರ್ ಹಿಡಿದಿದ್ದಾರೆ.
ದೇವದುರ್ಗದ ಜಾಲಹಳ್ಳಿಯಲ್ಲಿ ಘಟನೆ ನಡೆದಿದ್ದು ತಹಶೀಲ್ದಾರ್ ಕೆ.ಶಿವಶರಣಪ್ಪ ಟಿಪ್ಪರ್ ವಶಕ್ಕೆ ಪಡೆದಿದ್ದಾರೆ. ನಂಬರ್ ಪ್ಲೇಟ್ ಸಹ ಇಲ್ಲದೆ ಅಕ್ರಮ ದಂಧೆಯಲ್ಲಿ ತೊಡಗಿದ್ದ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ.
ಕೃಷ್ಣ ನದಿ ತೀರದ ಬಾಗೂರು, ಹೆರುಂಡಿ, ನಿಲವಂಜಿ, ಲಿಂಗದಹಳ್ಳಿಯಿಂದ ರಾತ್ರಿ-ಹಗಲು ಅಕ್ರಮ ಮರಳುಗಾರಿಕೆ ನಡೆದಿದೆ. ಇಲ್ಲಿಂದ ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ. ಘಟನೆ ಹಿನ್ನೆಲೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.