ಬೆಂಗಳೂರು: ವನ್ಯಜೀವಿಗಳ ಮಾರಾಟದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಕಬತೂರ್ ಶಾಹಿದ್ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಶಿವಾಜಿನಗರದ ಪಿಳ್ಳಪ್ಪ ಗಾರ್ಡನ್ ನಲ್ಲಿ ದಾಳಿ ನಡೆಸಿದ ಅರಣ್ಯಾಧಿಕಾರಿಗಳಿಗೆ ನಿಜಕ್ಕೂ ಶಾಕ್ ಆಗಿತ್ತು. ದಾಳಿ ವೇಳೆ 3 ಉಡ, 14 ವಿವಿಧ ಜಾತಿಯ ಪಕ್ಷಿಗಳನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಕಬೂತರ್ ಶಾಹಿದ್ ಆಕ್ರಮವಾಗಿ ಬೇಟೆಯಾಡಿ ಉಡಗಳನ್ನ ಹಿಡಿದಿದ್ದನು. ಬೆಂಗಳೂರಿನಿಂದ ಮುಂಬೈಗೆ ವನ್ಯಜೀವಿಗಳನ್ನ ಪೂರೈಸುತ್ತಿದ್ದನು.
Advertisement
ಶಾಹಿದ್ ಅರಣ್ಯಾಧಿಕಾರಿಗಳ ಬಲೆಗ ಬೀಳುವ ಮೊದಲು ಮುಂಬೈಯಲ್ಲಿ ಇವನ ಡೀಲರ್ ನ ಬಂಧನವಾಗಿತ್ತು. ಮುಂಬೈಯಲ್ಲಿ ಕಲೀಲ್ ಎಂಬಾತನ್ನು ಮುಂಬೈ ಅರಣ್ಯಾಧಿಕಾರಿಗಳು ಬಂಧಿಸಿದ್ದರು. ಈ ವೇಳೆ ಬಂಧಿತ ಕಲೀಲ ತನ್ನ ಪೂರೈಕೆದಾರ ಶಾಹಿದ್ ಹೆಸರನ್ನು ಬಾಯಿ ಬಿಟ್ಟಿದ್ದಾರೆ. ಮುಂಬೈ ಅಧಿಕಾರಿಗಳು ಬೆಂಗಳೂರಿನ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
Advertisement
ಖಚಿತ ಮಾಹಿತಿ ಆಧರಿಸಿ ಯಲಹಂಕ ಉಪವಲಯ ಅರಣ್ಯಾಧಿಕಾರಿ ಜಗನ್ನಾಥ್ ರೆಡ್ಡಿ ನೇತೃತ್ವದಲ್ಲಿ ರೇಡ್ ಮಾಡಿದಾಗ ಶಾಹಿದ್ ನನ್ನು ಬಂಧಿಸಿದ್ದಾರೆ. ಆರೋಪಿ ಶಾಹಿದ್ ಮೇಲೆ ಅಕ್ರಮ ಬೇಟೆ, ಅಕ್ರಮ ವನ್ಯಜೀವಿ ಸಾಗಾಟದ ಆರೋಪಡಿ ಪ್ರಕರಣ ದಾಖಲು ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅಡಿ ದೂರು ದಾಖಲು ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ.