– ಮಾಜಿ, ಹಾಲಿ ಸಚಿವ, ಶಾಸಕರ ಆಪ್ತನಿಗೆ ಥಳಿತ
ವಿಜಯಪುರ: ಜಿಲ್ಲೆಯ ಮಾಜಿ ಹಾಗೂ ಹಾಲಿ ಸಚಿವರು ಮತ್ತು ಹಾಲಿ ಶಾಸಕರ ಆಪ್ತನ ಕಾಮಕಾಂಡ ತಡವಾಗಿ ಹೊರಬಿದ್ದಿದೆ.
ಸುಮಾರು ಮೂರು ತಿಂಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದೀಗ ವಿಡಿಯೋ ವೈರಲ್ ಆಗಿದೆ. ವಿಜಯಪುರದ ನಿವಾಸಿಯಾಗಿರುವ ಪ್ರಕಾಶ್ ಭೋಸ್ಲೆ ಎಂಬಾತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಪ್ರಕಾಶ್ ಭೋಸ್ಲೆ ಸ್ನೇಹಿತ್ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾನೆ. ಅದೇ ಶಾಲೆಯ ಮಹಿಳಾ ಸಿಬ್ಬಂದಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಅನುಮಾನದ ಮೇರೆಗೆ ಮಹಿಳೆಯ ಸಂಬಂಧಿಕರು ವಿಜಯಪುರದ ಮನಗೂಳಿ ಅಗಸಿ ಬಳಿಯ ಮನೆಯಲ್ಲಿ ಅವಳ ಜೊತೆ ಕಾಮಕಾಂಡದಲ್ಲಿ ತೊಡಗಿದ್ದಾಗಲೇ ಏಕಾಏಕಿ ಮನೆಗೆ ನುಗ್ಗಿ ರೆಡ್ ಹ್ಯಾಂಡ್ ಆಗಿ ಹಿಡಿದು ಚೆನ್ನಾಗೆ ಥಳಿಸಿದ್ದಾರೆ.
ಪ್ರಕಾಶ್‍ನನ್ನ ಅರೆಬೆತ್ತಲೆ ಅವತಾರದಲ್ಲೆ ಮನೆಯೆಲ್ಲ ಓಡಾಡಿಸಿ ಥಳಿಸಿ ಮಹಿಳೆಯನ್ನ ಸಂಬಂಧಿಕರು ಕರೆದುಕೊಂಡು ಹೋಗಿದ್ದಾರೆ. ಇನ್ನು ಪ್ರಕಾಶ್ ಗೃಹ ಸಚಿವ ಎಂ.ಬಿ ಪಾಟೀಲ್, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗಿನ ಪೋಟೋಗಳು ಸಹ ಬಹಿರಂಗವಾಗಿದ್ದು, ಈತ ಚಲನಚಿತ್ರ ನಿರ್ಮಾಪಕನೂ ಆಗಿದ್ದಾನೆ ಎನ್ನಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv