ರಾಯಚೂರು: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿ ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಮುದಗಲ್ ಪಟ್ಟಣದಲ್ಲಿ ನಡೆದಿದೆ.
Advertisement
ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಅಂಕಲಿಮಠ ಕ್ರಾಸ್ ಬಳಿ ದಾಳಿ ನಡೆಸಿದ ಮುದಗಲ್ ಠಾಣೆ ಪೊಲೀಸರು ಅಕ್ರಮವಾಗಿ ಸಾಗಿಸುತ್ತಿದ್ದ 5.92 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ
Advertisement
Advertisement
ಸುಮಾರು 5.92 ಲಕ್ಷ ಮೌಲ್ಯದ 296 ಕ್ವಿಂಟಾಲ್‍ನ 605 ಅಕ್ಕಿ ಮೂಟೆಗಳು ಜಪ್ತಿಯಾಗಿವೆ. ಪಡಿತರದಾರರಿಂದಲೇ ಪಡಿತರ ಅಕ್ಕಿ ಖರೀದಿ ಮಾಡಿದ್ದ ಆರೋಪಿ ನಾಗೇಶ್ ವಿರೂಪಾಕ್ಷ ಗೌಡ, ಮಣಿಕಂಠ ಎಂಬುವವರಿಗೆ ಒಂದು ಲೋಡ್ ಮಾರಲು ಮುಂದಾಗಿದ್ದ. ಈ ವೇಳೆ ದಾಳಿ ನಡೆಸಿದ್ದ ಪೊಲೀಸರು ಪಡಿತರ ಅಕ್ಕಿ ದಂಧೆ ನಡೆಸುತ್ತಿದ್ದ ನಾಗೇಶ್‍ನನ್ನು ಸೆರೆ ಹಿಡಿದಿದ್ದಾರೆ. ಪೊಲೀಸರ ಮುಂದೆ ನಾಗೇಶ್ ತಪ್ಪೊಪ್ಪಿಕೊಂಡಿದ್ದು, ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೈದರಾಬಾದ್ ಮರ್ಯಾದಾ ಹತ್ಯೆಯನ್ನು ಖಂಡಿಸುತ್ತೇನೆ – ಅಸಾದುದ್ದೀನ್ ಓವೈಸಿ
Advertisement