ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಹೀನಾಯವಾಗಿ ಸೋಲು ಕಂಡು, ಇಡೀ ಸಿನಿಮಾ ತಂಡದ ಮನಸ್ಸಿನಲ್ಲಿ ಕಹಿ ಸೌಧವನ್ನೇ ಕಟ್ಟಿದೆ. ಅದರಿಂದ ದೂರ ಬಂದು ಮತ್ತೊಂದು ಮಗ್ಗುಲಗೆ ಹೊರಳೋಣವೆಂದರೆ, ಇದೀಗ ಜಾರಿ ನಿರ್ದೇಶನಾಲಯವು (ಇಡಿ) ನಿದ್ದೆ ಮಾಡದಂತೆ ಮಾಡಿದೆ. ಲೈಗರ್ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಚಾರ ಗೊತ್ತಿದ್ದದ್ದೆ. ಈ ಸಿನಿಮಾ ನೂರಾರು ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗಿತ್ತು. ಚಿತ್ರತಂಡಕ್ಕೆ ಆ ನಂಬಿಕೆಯೂ ಇತ್ತು. ಆದರೆ, ಅದು ಸುಳ್ಳಾಯಿತು.
Advertisement
ಲೈಗರ್ ಸಿನಿಮಾ ಸೋತರೂ, ಅದು ಕೊಡುತ್ತಿರುವ ನೋವು ಅಷ್ಟಿಷ್ಟಲ್ಲ. ಸೋಲಿನ ನಂತರ ಈ ಸಿನಿಮಾಗೆ ಹಣ ಹೂಡಿದ್ದು ಹೇಗೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಅಕ್ರಮ ಹಣದಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎನ್ನುವುದು ಜಾರಿ ನಿರ್ದೇಶನಾಲಯದ ಆರೋಪ. ಹಾಗಾಗಿಯೇ ಈ ಸಿನಿಮಾದ ನಟ ವಿಜಯ್ ದೇವರಕೊಂಡ ಅವರಿಗೆ ಇಡಿ ನೋಟಿಸ್ ನೋಡಿತ್ತು. ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ನಿನ್ನೆ ವಿಜಯ್ ದೇವರಕೊಂಡ ಹೈದರಾಬಾದ್ ನಲ್ಲಿರುವ ಇಡಿ ಕಚೇರಿಗೆ ಭೇಟಿ ನೀಡಿ ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಬ್ಯಾನ್ ಆಕ್ರೋಶದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ
Advertisement
Advertisement
ಲೈಗರ್ ಸಿನಿಮಾಗೆ ಬಳಸಿರುವ ಹಣವು ವಿದೇಶದಿಂದ ಹರಿದು ಬಂದಿದೆ ಎನ್ನುವುದು ಹಾಗೂ ಹಣ ವರ್ಗಾವಣೆಯಲ್ಲಿ ನಿಯಮ ಉಲ್ಲಂಘನೆ ಆಗಿದೆ ಎನ್ನುವುದು ಇಡಿ ಆರೋಪ. ಹಾಗಾಗಿಯೇ ಸಿನಿಮಾ ನಿರ್ದೇಶಕ ಪೂರಿ ಜಗನ್ನಾಥ್, ನಿರ್ಮಾಪಕಿ ಚಾರ್ಮಿ ಕೌರ್ ಹಾಗೂ ವಿಜಯ್ ದೇವರಕೊಂಡ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಹಿಂದೆಯೇ ಪೂರಿ ಮತ್ತು ಚಾರ್ಮಿ ಕೌರ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಇದೀಗ ವಿಜಯ್ ದೇವರಕೊಂಡ ಕೂಡ ಅಧಿಕಾರಿಗಳ ಪ್ರಶ್ನೆಯನ್ನು ಎದುರಿಸಿದ್ದಾರೆ.