ರಾಯಚೂರು: ಜಿಲ್ಲೆಯಲ್ಲಿ ಸಿಎಚ್ ಪೌಡರ್ ಮಿಶ್ರಿತ ಅಕ್ರಮ ಸೇಂದಿ ಮಾರಾಟ ಜೋರಾಗಿದ್ದು, ಈ ದಂಧೆಯ ವಿರುದ್ಧ ಕ್ರಮಕೈಗೊಂಡಿರುವ ಅಬಕಾರಿ ವಿಚಕ್ಷಣ ದಳ ಜಿಲ್ಲೆಯಾದ್ಯಂತ ನಿರಂತರ ದಾಳಿ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ ಅಬಕಾರಿ ಅಧಿಕಾರಿಗಳು ನಡೆಸಿದ ದಾಳಿಗಳಲ್ಲಿ ಅಕ್ರಮ ಸಿಎಚ್ ಪೌಡರ್ ಕಲಬೆರಿಕೆ ಮಾಡಿ ಸೇಂದಿ ಮಾರಾಟಗಾರರ ವಿರುದ್ಧ 8 ಕ್ಕೂ ಹೆಚ್ಚು ಪ್ರಕರಣಗಳನ್ನ ದಾಖಲಿಸಿದ್ದಾರೆ. ಇಂದು ಕೂಡ ರಾಯಚೂರಿನ ರಾಗಿಮಾನಗಡ್ಡಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು 100 ಲೀಟರ್ ಗೂ ಅಧಿಕ ಪ್ರಮಾಣದ ಕಲಬೆರಿಕೆ ಸೇಂದಿ ಜಪ್ತಿ ಮಾಡಿದ್ದಾರೆ.
Advertisement
Advertisement
ಪ್ರಕರಣದಲ್ಲಿ ಅಕ್ರಮ ಸೇಂದಿ ಮಾರಾಟ ಮಾಡುತ್ತಿದ್ದ ಪ್ರಸಾದ್, ಬಾಬುರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವಾರದಿಂದ ನಿರಂತರ ದಾಳಿ ನಡೆಸಿರುವ ಅಧಿಕಾರಿಗಳು ಇದುವರೆಗೆ 30 ಕೆ.ಜಿಗೂ ಅಧಿಕ ಪ್ರಮಾಣದ ಸಿಎಚ್ ಪೌಡರ್, 7 ಕೆ.ಜಿ ಸಿಟ್ರಿಕ್ ಆಸಿಡ್, 5 ಕೆ.ಜಿ ವೈಟ್ ಪೇಸ್ಟ್, 10 ಕೆ.ಜಿ ಸ್ಯಾಕರಿನ್, 1 ಈಸ್ಟ್ ಹಾಗೂ 400 ಲೀ.ಗೂ ಅಧಿಕ ಪ್ರಮಾಣದ ಕಲಬೆರಿಕೆ ಸೇಂದಿಯನ್ನ ಜಪ್ತಿ ಮಾಡಿದ್ದಾರೆ.
Advertisement
ಮೊಹರಂ ಹಾಗೂ ಗಣೇಶ ಹಬ್ಬದ ಹಿನ್ನೆಲೆ ಅಕ್ರಮ ಮದ್ಯ ಮಾರಾಟ ಹಾಗೂ ಕಲಬೆರಿಕೆ ಸೇಂದಿ ಮಾರಾಟ ಹೆಚ್ಚಾಗಿದ್ದರಿಂದ ದಾಳಿ ನಡೆಸಲಾಗುತ್ತಿದೆ ಎಂದು ಅಬಕಾರಿ ಪ್ರಭಾರಿ ಉಪ ಅಧೀಕ್ಷಕ ಹನುಮಂತ ಗುತ್ತೆದಾರ್ ತಿಳಿಸಿದ್ದಾರೆ.
Advertisement
https://www.youtube.com/watch?v=9ZGaBHdIC8E