ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪುಲ್ವಾಮಾ (Pulwama) ಜಿಲ್ಲೆಯ ನ್ಯೂ ಕಾಲೋನಿಯಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕ (Terrorist) ಆಶಿಕ್ ನೆಂಗ್ರೂನ (Ashiq Nengroo) ಮನೆಯನ್ನು ಅಧಿಕಾರಿಗಳು ಶನಿವಾರ ನೆಲಸಮಗೊಳಿಸಿದ್ದಾರೆ (Demolished).
ನಿಷೇಧಿತ ಭಯೋತ್ಪಾದಕ ಸಂಘಟನೆ ಜೆಇಎಂನ ಕಮಾಂಡರ್ ಮತ್ತು ಪುಲ್ವಾಮಾ ದಾಳಿಯ ಆರೋಪಿಯಾಗಿರುವ ನೆಂಗ್ರೂನ ಅಕ್ರಮವಾದ 2 ಅಂತಸ್ತಿನ ಮನೆಯನ್ನು ಜಿಲ್ಲಾಡಳಿತ ಪೊಲೀಸರ ಸಮ್ಮುಖದಲ್ಲಿ ನೆಲಸಮಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಮಾಚಲಕ್ಕೆ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಆಯ್ಕೆ ಮಾಡಿದ ಕಾಂಗ್ರೆಸ್
Advertisement
Advertisement
ನೆಂಗ್ರೂ ನಿವಾಸವನ್ನು ಧ್ವಂಸಗೊಳಿಸಿರುವ ನಡೆಯನ್ನು ಉಗ್ರಗಾಮಿ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ವಿರೋಧಿಸಿದೆ. ಧ್ವಂಸಗೊಳಿಸುವ ಕಾರ್ಯವನ್ನು ನಿರ್ವಹಿಸುವ ಅಧಿಕಾರಿಗಳು ಇದರ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ.
Advertisement
ಆಶಿಕ್ ನೆಂಗ್ರೂ ಯಾರು?
ನೆಂಗ್ರೂ ವಾಂಟೆಡ್ ಜೆಇಎಂ ಕಮಾಂಡರ್ ಮತ್ತು 2019 ರ ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ಈ ವರ್ಷ ಏಪ್ರಿಲ್‌ನಲ್ಲಿ, ಕೇಂದ್ರ ಸರ್ಕಾರ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಕಾಯ್ದೆಯಡಿಯಲ್ಲಿ ಜೆಇಎಂ ಕಮಾಂಡರ್ ಅನ್ನು ನಿಯೋಜಿತ ಭಯೋತ್ಪಾದಕ ಎಂದು ಘೋಷಿಸಿದೆ. ಇದನ್ನೂ ಓದಿ: ಮಳೆಬಿಲ್ಲು ಬಣ್ಣದ ಶರ್ಟ್ ಧರಿಸಿ ಬಂಧನವಾಗಿದ್ದ ಅಮೆರಿಕದ ಪತ್ರಕರ್ತ ಕತಾರ್‌ನಲ್ಲಿ ನಿಧನ