ಚಿಕ್ಕಮಗಳೂರು: ಕಾಫಿನಾಡ ಪೊಲೀಸರು ಮಲೆನಾಡು ಭಾಗದ ಬಂದೂಕು ಮೇಲೆ ಯುದ್ಧ ಸಾರಿದ್ದಾರೆ. ಹಳ್ಳಿ-ಹಳ್ಳಿ, ಗಲ್ಲಿ-ಗಲ್ಲಿಯಲ್ಲಿ ಸುತ್ತಾಡಿ ಅಕ್ರಮ ಬಂದೂಕುಗಳ ಸೀಜ್ ಮಾಡಿದ್ದಾರೆ. ಅಮಾಯಕರ ಸಾವು ಬಳಿಕ ಎಚ್ಚೆತ್ತ ಪೊಲೀಸರು ಚಿಕ್ಕಮಗಳೂರಿ (Chikkamagaluru) ನಲ್ಲಿ ಆಪರೇಷನ್ ಬಂದೂಕು ಶುರುಮಾಡಿದ್ದಾರೆ.
Advertisement
ಮಲೆನಾಡು ಭಾಗದಲ್ಲಿ ಅಕ್ರಮ ಬಂದೂಕಿನಿಂದ ನಡೆದ ಸರಣಿ ಕೊಲೆ ಬಳಿಕ ಚಿಕ್ಕಮಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಬಾಳೆಹೊನ್ನೂರು ಸಮೀಪದ ಚಂದುವಳ್ಳಿ ಗ್ರಾಮದಲ್ಲಿ ಮಿಸ್ ಫೈರಿಂಗ್ ಆಗಿ ಇಬ್ಬರು ಮೃತಪಟ್ಟಿದ್ರು. ಅದರಲ್ಲೂ ಅಕ್ರಮ ಬಂದೂಕಿನಿಂದ ನಡೆಯುತ್ತಿರುವ ಸಾವಿಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಜಿಲ್ಲಾದ್ಯಂತ ಅಕ್ರಮ ಬಂದೂಕುಗಳ ಮೇಲೆ ದಾಳಿ ನಡೆಸಿದ್ದಾರೆ. ಬರೋಬ್ಬರಿ 51ಕ್ಕೂ ಹೆಚ್ಚು ಬಂದೂಕುಗಳನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮನೆ ಮಠ ಬಿಟ್ಟು ಪಕ್ಷ ಕಟ್ಟಿದ್ದಾರೆ- ಯಡಿಯೂರಪ್ಪ ಕೊಂಡಾಡಿದ ಯತ್ನಾಳ್
Advertisement
Advertisement
2 ದಿನದಿಂದ ಚಿಕ್ಕಮಗಳೂರಿನ ಬಾಳೆಹೊನ್ನೂರು, ಬಾಳೂರು, ಕಳಸ ಹಾಗು ಎನ್‍ಆರ್ ಪುರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಪರವಾನಿಗೆ ರಹಿತ 41, ಪರವಾನಿಗೆ ಸಹಿತ 10 ಬಂದೂಕು, 2 ರಿವಾಲ್ವರ್, 22 ರೈಫಲ್ ಗುಂಡು, 40 ಬುಕ್ ಶಾಟ್ ಗುಂಡು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸಿದ್ದಾರೆ.
Advertisement
ಅಹಿತಕರ ಘಟನೆಗಳು ನಡೆಯದಂತೆ ಖಾಕಿ ಪಡೆ ಅಲರ್ಟ್ ಆಗಿದೆ. ಅಕ್ರಮ ಬಂದೂಕುಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k