ಕ್ಲಬ್‌ಗಳಲ್ಲಿ ಅಕ್ರಮ ಜೂಜಾಟ – 37 ಮಂದಿ ಅರೆಸ್ಟ್, ಕಾರು, ಬೈಕ್ ವಶ

Public TV
1 Min Read
Car

ಹಾಸನ: ಜಿಲ್ಲೆಯಲ್ಲಿಂದು ವಿವಿಧ ಕ್ಲಬ್‌ಗಳ (Club) ಮೇಲೆ ನಡೆದ ದಾಳಿಯಲ್ಲಿ 37 ಮಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ರಿಕ್ರಿಯೇಷನ್‌ ಕ್ಲಬ್ (Recreation Club) ಹೆಸರಿನಲ್ಲಿ ಜೂಜಾಟ ನಡೆಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಎರಡು ಕ್ಲಬ್‌ಗಳ ಮೇಲೆ ದಾಳಿ ನಡೆಸಿ, 75 ಸಾವಿರ ರೂ ನಗದು ಜಪ್ತಿ ಮಾಡಿಕೊಂಡು, 37 ಜನರನ್ನ ಬಂಧಿಸಲಾಗಿದೆ. ಇದನ್ನೂ ಓದಿ: Karnataka PGCET 2023: ಸೆಪ್ಟೆಂಬರ್ 23 & 24ರಂದು ಪಿಜಿ ಸಿಇಟಿ ಪರೀಕ್ಷೆ- ಕೆಇಎ

Crime

ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆಯಲ್ಲಿ ಚೌಡೇಶ್ವರಿ ಕ್ರಿಯೇಶನ್ ಕ್ಲಬ್‌ನಲ್ಲಿ ಜೂಜಾಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 28 ಜನರನ್ನು ಬಂಧಿಸಿ, ಜೂಜಿಗಿಟ್ಟಿದ್ದ 44,150 ರೂ. ನಗದು, 20 ಮೊಬೈಲ್, ಎರಡು ಬೈಕ್, ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಬೆಂಕಿ ಪ್ರಕರಣ; ಗಂಭೀರ ಸ್ಥಿತಿಯಲ್ಲಿದ್ದ ಚೀಫ್‌ ಎಂಜಿನಿಯರ್‌ ಶಿವಕುಮಾರ್‌ ನಿಧನ

ಮತ್ತೊಂದು ಪ್ರಕರಣದಲ್ಲಿ ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆಯ ಫ್ಲಾಂಟರ್ಸ್ ಕ್ಲಬ್‌ನಲ್ಲಿ ಕಾನೂನುಬಾಹಿರವಾಗಿ ಅಂದರ್-ಬಾಹರ್ ಜೂಜಾಡುತ್ತಿದ್ದ 9 ಜನರನ್ನ ಬಂಧಿಸಿದ್ದು, ಅವರಿಂದ 31,260 ರೂ. ನಗದು, 6 ಕಾರು, 12 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಈ ಎರಡು ಕ್ಲಬ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದ್ದು. ಮುಂದೆ ಜಿಲ್ಲೆಯಲ್ಲಿ ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಹರಿರಾಂ ಶಂಕರ್ ಎಚ್ಚರಿಸಿದ್ದಾರೆ.

Web Stories

Share This Article