ಕೊಲೊಂಬೋ: ರಾಮೇಶ್ವರಂನಿಂದ ಹೊರಟಿದ್ದ 6 ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿ ಅವರ ದೋಣಿಗಳನ್ನು ವಶಪಡಿಸಿಕೊಂಡಿದೆ.
ಅಗತ್ಯ ಅನುಮತಿ ಪಡೆದು ರಾಮೇಶ್ವರಂನಿಂದ ಒಟ್ಟು 400 ದೋಣಿಗಳು ಹೋರಟಿತ್ತು. ಅದರಲ್ಲಿ ತಲೈಮನ್ನಾರ್ ಮತ್ತು ನಾಚಿಕುಡವು ಬಳಿ ಮೀನುಗಾರಿಕೆ ನಡೆಸುತ್ತಿದ್ದ 6 ಮಂದಿಯ ದೋಣಿ ಸುತ್ತ ನೌಕಾಪಡೆಯ ಗಸ್ತು ಸುತ್ತುವರೆದಿದ್ದು, ಅಕ್ರಮವಾಗಿ ಮೀನುಗಾರಿಕೆ ಆರೋಪದ ಮೇರೆಗೆ ಅವರನ್ನು ಬಂಧಿಸಿದ್ದಾರೆ.
Advertisement
Advertisement
ಆರಂಭದಲ್ಲಿ 11 ಮೀನುಗಾರರನ್ನು ಬಂಧಿಸಲಾಯಿತು. ಅವರಲ್ಲಿ ಐವರು ದೋಣಿ ಎಂಜಿನ್ ಸ್ಥಗಿತಗೊಂಡಿದ್ದರಿಂದ ಶ್ರೀಲಂಕಾದ ಸಮುದ್ರಕ್ಕೆ ತೇಲಿಹೋಗಿದೆ ಎಂದು ಖಚಿತ ಪಡೆಸಿಕೊಂಡ ಶ್ರೀಲಂಕಾ ನೌಕಾಪಡೆ ನಂತರ ಆ ಐವರನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ
Advertisement
Advertisement
ಬಂಧಿತರನ್ನು ಬಾಲಮುರುಗನ್, ಅಂತೋನಿ, ತಂಗಪಾಂಡಿ, ಅಜಿತ್, ಕೃಷ್ಣನ್ ಮತ್ತು ಮುದುಗು ಪಿಚೈ ಎಂದು ಗುರುತಿಸಲಾಗಿದೆ. ಮೀನುಗಾರರನ್ನು ತಲೈಮನ್ನಾರ್ ನೇವಿ ಕ್ಯಾಂಪ್‍ಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ಡಿಕೆಶಿಗೆ ಜಮೀರ್ ಡಿಚ್ಚಿ – ಸಿದ್ದರಾಮಯ್ಯಗೆ ಜಮೀರ್ ಜಿಂದಾಬಾದ್