ಚಾಮರಾಜನಗರ: ಅಕ್ರಮ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಯಿ ಕೀಳಲು ಕೆಲಸಕ್ಕೆ ಹೋಗಿದ್ದ ಇಬ್ಬರು ದುರ್ಮರಣ ಹೊಂದಿದ್ದಾರೆ. ಕಾಡಂದಿ ಕಾಟದಿಂದ ಜಮೀನಿಗೆ ಅಕ್ರಮ ವಿದ್ಯುತ್ ಅಳವಡಿಸಿದ್ದ ಹಿನ್ನೆಲೆ, ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ. ಸ್ವಾಮಿ, ಕೃಷ್ಣ ಮೃತ ದುರ್ದೈವಿಗಳು.
ಗ್ರಾಮದ ಪ್ರಕಾಶ್ ಎಂಬವರ ಜಮೀನಿನಲ್ಲಿ ಘಟನೆ ನಡೆದಿದೆ. ಕೇರಳ ಮೂಲದವರಿಗೆ ಜಮೀನು ಗುತ್ತಿಗೆಯನ್ನು ಕೊಡಲಾಗಿತ್ತು. ಬೆಳೆ ರಕ್ಷಣೆಗೆ ಅಕ್ರಮ ವಿದ್ಯುತ್ ಹಾಯಿಸಿದ್ದರು. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.