-ಸಿಂಗಂ ರವಿಚೆನ್ನಣ್ಣನವರ್ ಏರಿಯಾದಲ್ಲೇ ಗಾಂಜಾ ದಂಧೆ
ಬೆಂಗಳೂರು: ಇತ್ತೀಚೆಗೆ ಜಿಲ್ಲೆಯಾದ್ಯಂತ ಗಾಂಜಾ ಮಾರಾಟ ದಂಧೆ ಮೇಲೆ ಪೊಲೀಸರು ಹೆಚ್ಚು ನಿಗಾ ವಹಿಸಿದ್ದರೂ ಗಾಂಜಾ ಮಾರಾಟ ಗ್ಯಾಂಗ್ ಮಾತ್ರ ಯಾವುದೇ ತಲೆ ಕೆಡಿಸಿಕೊಂಡಿಲ್ಲ. ಏನಾದರೂ ಮಾಡಿಕೊಳ್ಳಿ ಕ್ಯಾರೆ ಮಾಡಲ್ಲ ಎನ್ನುತ್ತ ಸಾಮಾಜಿಕ ಜಾಲತಾಣವನ್ನು ಬಳಸಿ ಗಾಂಜಾ ದಂಧೆಯನ್ನು ಎಗ್ಗಿಲ್ಲದಂತೆ ನಡೆಸುತ್ತಿದ್ದಾರೆ.
Advertisement
ಸಾಮಾನ್ಯವಾಗಿ ನಾವೆಲ್ಲಾ ಆನ್‍ಲೈನ್‍ನಲ್ಲಿ ಊಟ, ಇಲ್ಲ ಬಟ್ಟೆ, ಎಲೆಕ್ಟ್ರಾನಿಕ್ ಐಟಮ್ಸ್ ಹೀಗೆ ವಸ್ತುಗಳನ್ನ ಆರ್ಡರ್ ಮಾಡಿ ತರಿಸಿಕೊಳ್ಳುತ್ತೇವೆ. ಆದರೆ ಆನ್‍ಲೈನ್‍ನಲ್ಲಿ ಗಾಂಜಾ ಸಿಗುತ್ತೆ ಎಂದರೆ ನಿಜಕ್ಕೂ ಶಾಕ್ ಆಗುತ್ತೆ. ಈ ದಂಧೆ ನಡೆಯುತ್ತಿರೋದು ಬೇರೆಲ್ಲೂ ಅಲ್ಲ, ನಮ್ಮ ಸಿಲಿಕಾನ್ ಸಿಟಿಯಲ್ಲಿ. ಹೌದು ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದಂತೆ ಆನ್‍ಲೈನ್ ಗಾಂಜಾ ಗಂಧೆ ನಡೆಯುತ್ತಿದೆ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ ನಾವು ಸುಮ್ನೆ ಇದ್ದರೆ ಹೇಗೆ ಅಂತ ಗಾಂಜಾ ಮಾರಾಟ ಗ್ಯಾಂಗ್ ರಂಗೋಲಿ ಕೆಳಗೆ ನುಗ್ಗಿ ಮಾಸ್ಟರ್ ಪ್ಲಾನ್ ಮಾಡಿದೆ. ಗಾಂಜಾ ದಂಧೆಕೋರರು ಆನ್‍ಲೈನ್‍ಗೂ ಲಗ್ಗೆ ಇಟ್ಟು ಪ್ರತಿಷ್ಠಿತ ಕಾಲೇಜು ಯುವಕ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಗಾಂಜಾ ಮಾರಟ ಮಾಡುತ್ತಿದ್ದಾರೆ. ಈಗಿನ ಯುವಕ, ಯುವತಿಯರಿಗೆ ಅಗತ್ಯತೆಗೆ ಅನುಗುಣವಾಗಿ ಆನ್‍ಲೈನ್‍ನಲ್ಲಿ ಗಾಂಜಾ ಮಾರಾಟ ಮಾಡುವುದನ್ನ ಶುರುವಿಟ್ಟುಕೊಂಡಿದ್ದಾರೆ.
Advertisement
Advertisement
ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಜಾಲಾ ಹರಡಿಬಿಟ್ಟಿದೆ. ಇತ್ತೀಚೆಗೆ ಆನೇಕಲ್ ತಾಲೂಕಿನಲ್ಲಿ ವಿಬಿಎಚ್‍ಎಸ್ ಅಪಾಟ್‌ರ್ಮೆಂಟ್, ಅಲಯನ್ಸ್ ಕಾಲೇಜು ಸೇರಿದಂತೆ ಹಲವೆಡೆ ಗಾಂಜಾ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ, ಅಂತರಾಜ್ಯ ದಂಧೆಕೋರ ಡೇವಿಡ್‍ನನ್ನು ಬಂಧಿಸಿದ್ದರು. ಆತನ ಬಳಿ ಇದ್ದ ಬರೋಬ್ಬರಿ 800 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದರು. ಆದರೂ ಭಯಬೀಳದ ದಂಧೆಕೋರರು ಹೊರ ರಾಜ್ಯಗಳಿಂದ ಬಂದು ವಿಬಿಎಚ್‍ಎಸ್ ಅಪಾಟ್‌ರ್ಮೆಂಟ್ ನ ಪ್ಲಾಟ್‍ಗಳನ್ನು ಬಾಡಿಗೆಗೆ ಪಡೆದು, ಆನ್‍ಲೈನ್ ಮೂಲಕ ಗಾಂಜಾ ವ್ಯಾಪಾರ ಶುರುವಿಟ್ಟುಕೊಂಡಿದ್ದಾರೆ. ಗಾಂಜಾ ಬುಕ್ ಮಾಡಿದ ಯುವಕ ಯುವತಿಯರ ಪೇಪರ್ ಮೇಲೆ ಹೆಸರು ಬರೆದು ಯಾರ ಭಯವು ಇಲ್ಲದೆ, ಎಗ್ಗಿಲ್ಲದೆ ಗಾಂಜಾ ಸಪ್ಲೈ ಮಾಡ್ತಿದ್ದಾರೆ.
Advertisement
ಇಷ್ಟೇ ಅಲ್ಲ ಅವರ ಅಡ್ಡಾಕ್ಕೆ ಸ್ಥಳೀಯರು ಯಾರಾದರೂ ಕಾಲಿಟ್ಟರೆ ಗೇಟ್ ಬಳಿ ಬೌನ್ಸರ್ ಗಳನ್ನು ಇಟ್ಟು, ಯಾರು ಒಳ ಹೋಗದಂತೆ ತಡೆಯುತ್ತಿದ್ದಾರೆ. ಗಾಂಜಾ ಪಡೆದು ಸೇವನೆ ಮಾಡುವ ಪ್ರತಿಷ್ಠಿತ ಕಾಲೇಜಿನ ಯುವಕ ಯುವತಿಯರು ನಡುರಸ್ತೆಯಲ್ಲಿ ನಿಂತು ತೂರಾಡುತ್ತಿರುವ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
https://www.youtube.com/watch?v=gVymkMfbH8A