ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್‌ನಿಂದ ಭಾರತದಲ್ಲಿ ಎಲ್‌ಪಿಜಿ (LPG Shortage) ಕೊರತೆ ಎದುರಾಗಿದೆ. ಅಕ್ರಮ ಸಿಲಿಂಡರ್ ದಾಸ್ತಾನು, ಬ್ಲಾಕ್‌ನಲ್ಲಿ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಹಾವಳಿ ಹೆಚ್ಚಾಗುತ್ತಿದೆ. ಬೆಂಗಳೂರಲ್ಲಿ ಅಕ್ರಮ ಸಿಲಿಂಡರ್ ದಾಸ್ತಾನು ಮಾಡಿದ್ದಕ್ಕೆ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪೀಣ್ಯ, RMC ಯಾರ್ಡ್, ಕೆಂಗೇರಿ, ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗಾಟಗಾರರು ಅಕ್ರಮವಾಗಿ ಸಿಲಿಂಡರ್ ದಾಸ್ತಾನು ಮಾಡಿದ್ದರು. ಇದನ್ನೂ ಓದಿ: ಬಿಸಿನೆಸ್ ಡೇ ಸಂಡೇ ಕೂಡ ಸಿಲಿಂಡರ್ ಅಭಾವ – ನಾನ್‌ವೆಜ್ ಹೋಟೆಲ್‌ಗಳಿಗೆ ಭಾರಿ ಹೊಡೆತ
ಬೆಂಗಳೂರಲ್ಲಿ ಎಲ್‌ಪಿಜಿ ಅಭಾವದಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಹಲವೆಡೆ ಹೋಟೆಲ್‌ಗಳನ್ನು ಬಂದ್ ಮಾಡಲಾಗಿದೆ. ಇನ್ನೂ ಕೆಲವೆಡೆ ತಿಂಡಿ-ಊಟದ ಮೆನುವಿನಲ್ಲಿ ಕಡಿತಗೊಳಿಸಲಾಗಿದೆ. ಗೃಹಬಳಕೆ ಸಿಲಿಂಡರ್‌ಗೂ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಏಜೆನ್ಸಿಗಳ ಮುಂದೆ ಸಿಲಿಂಡರ್‌ಗಾಗಿ ಸಾರ್ವಜನಿಕರು ಕ್ಯೂ ನಿಲ್ಲುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಕೆಲವರು ಅಕ್ರಮವಾಗಿ ಸಿಲಿಂಡರ್ ದಾಸ್ತಾನು ಇಟ್ಟುಕೊಂಡು ಬ್ಲಾಕ್‌ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಎಚ್ಚರಿಕೆ ವಹಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದೃಷ್ಟಿಹೀನ, ಬುದ್ಧಿಮಾಂದ್ಯ ಮಕ್ಕಳಿರುವ ಆಶ್ರಮದಲ್ಲೂ ಸಿಲಿಂಡರ್ ಸಮಸ್ಯೆ – ಊಟಕ್ಕೂ ಪರದಾಟ, ಗ್ಯಾಸ್‌ಗಾಗಿ ಪತ್ರ

