ಅಕ್ರಮ ಗೋ ಸಾಗಾಟ – 6 ಆರೋಪಿಗಳನ್ನ ಪೊಲೀಸರಿಗೆ ಒಪ್ಪಿಸಿದ RSS ಕಾರ್ಯಕರ್ತರು

Public TV
1 Min Read
Mandya Go Transport RSS

ಮಂಡ್ಯ: ಅಕ್ರಮವಾಗಿ ಗೋ ಸಾಗಾಟ ಮಾಡ್ತಿದ್ದ ಆರು ಆರೋಪಿಗಳನ್ನು RSS ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿರುವ ಘಟನೆ ನೆಲ್ಲಿಗೆರೆ ಟೋಲ್ ಬಳಿ ನಡೆದಿದೆ.

Mandya Go Transport RSS 1

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನೆಲ್ಲಿಗೆರೆಯಲ್ಲಿ 4 ಹಸು, ಟನ್‍ಗಟ್ಟಲೇ ಗೋಮಾಂಸವನ್ನು ಆರೋಪಿಗಳು ಸಾಗಾಟ ಮಾಡಲು ಯತ್ನಿಸುತ್ತಿದ್ದರು. ಸುದ್ದಿ ತಿಳಿದ  RSS ಕಾರ್ಯಕರ್ತರು ಟೋಲ್ ಬಳಿ ವಾಹನವನ್ನು ತಡೆದಿದ್ದಾರೆ. ಈ ವೇಳೆ 6 ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದು, 4 ಹಸುಗಳನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ:  ನರಬಲಿಗಾಗಿ 7 ವರ್ಷದ ಕಂದಮ್ಮ ಅಪಹರಣ – ಇಬ್ಬರು ಅರೆಸ್ಟ್

Mandya Go Transport RSS 2

ಕಾರ್ಯಕರ್ತರು ಆರೋಪಿಗಳನ್ನು ಒಪ್ಪಿಸಿದ ಮೇಲೆಯೂ ಅವರ ವಿರುದ್ಧ ಕೇಸ್ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆ. ಆರೋಪಿಗಳನ್ನು ಮಧ್ಯರಾತ್ರಿ ವಶಕ್ಕೆ ಪಡೆದ್ರು ಈವರೆಗೆ ಕೇಸ್ ದಾಖಲಾಗಿಲ್ಲ. ಪ್ರಸ್ತುತ ಈ ಪ್ರಕರಣ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *