Bengaluru CityDistrictsKarnatakaLatestMain Post

ಬೆಂಗಳೂರಿನ ಸಿಗ್ನಲ್‍ಗಳಲ್ಲಿ ಬಾಡಿಗೆ ಮಕ್ಕಳ ದಂಧೆ – ಭಿಕ್ಷೆ ಬೇಡುವವರ ಸಂಪಾದನೆ ಎಷ್ಟು ಗೊತ್ತಾ?

ಬೆಂಗಳೂರು: ನಗರದಲ್ಲಿ ದಿನೇ, ದಿನೇ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಿಕ್ಷೆ ಬೇಡುವ ನೆಪದಲ್ಲಿ ಹಣ ಮಾಡುವ ಹೊಸ ದಂಧೆ ಶುರುವಾಗಿದೆ.

ಯಲಹಂಕ, ಜಾಲಹಳ್ಳಿ, ಗೊರಗುಂಟೆಪಾಳ್ಯ, ನಾಗವಾರ ಸೇರಿದಂತೆ ಹಲವೆಡೆ ಮಕ್ಕಳನ್ನು ಸೆರಗಿನಲ್ಲಿ ಹಾಕಿಕೊಂಡು ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವು ಅವರದ್ದೇ ಮಕ್ಕಳಾ? ಬೇರೆಯವರದ್ದಾ ಎನ್ನುವುದು ಗೊತ್ತಿಲ್ಲ. ಕೇಳಿದರೆ ನಮ್ಮದೇ ಮಗು ಎಂದು ಹೇಳುತ್ತಾರೆ. ಇದನ್ನೂ ಓದಿ: ದೆಹಲಿ ಇಡಿ ಕಚೇರಿಗೆ ರಾಹುಲ್ ಹಾಜರಿ ಸಾಧ್ಯತೆ – ರ್‍ಯಾಲಿ, ಧರಣಿಗೆ ಕಾಂಗ್ರೆಸ್ ಸಿದ್ಧತೆ

ನೀನು ಭಿಕ್ಷೆ ಯಾಕೆ ಬೇಡುತ್ತಿದ್ಯಾ ಗಂಡ ಇಲ್ವಾ ಎಂದು ಕೇಳಿದರೆ, ಅವರು ನನ್ನ ಗಂಡ ಗಾರೆ ಕೆಲಸಕ್ಕೆ ಹೋಗುತ್ತಾರೆ ಎಂದು ನೆಪ ಹೇಳುತ್ತಾರೆ. ಹೀಗೆ ಭಿಕ್ಷೆ ಬೇಡುವವರು ಬಾಡಿಗೆಗೆ ಮಗುವನ್ನು ತರುತ್ತಿದ್ದಾರಾ ಎಂದು ವಿಚಾರಿಸಿದಾಗ ಜಾಲಹಳ್ಳಿ ಸಿಗ್ನಲ್ ಬಳಿ ಮಹಿಳೆಯೊಬ್ಬರು ಒಂದು ಮಗುವನ್ನು ತಂದು ಭಿಕ್ಷೆ ಬೇಡುವ ಮಹಿಳೆಗೆ ಕೊಟ್ಟಿರುವುದು ಕಂಡು ಬಂದಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಲಾಲೂ ಪ್ರಸಾದ್ ಯಾದವ್ ಸ್ಪರ್ಧೆ

ಭಿಕ್ಷಾಟನೆ ಮುಕ್ತ ಬೆಂಗಳೂರು ಮಾಡುವುದಕ್ಕೆ ಅಭಿಯಾನ ಮಾಡಿದ್ದ ಬೆಂಗಳೂರು ಹುಡುಗರ ತಂಡದವರು ಈ ಪುಟ್ಟ ಕಂದಮ್ಮಗಳನ್ನು ಬಳಸಿಕೊಂಡು ಭಿಕ್ಷಾಟನೆ ಮಾಡುತ್ತಿರುವ ಕರಾಳ ಸತ್ಯವನ್ನು ಬಯಲಿಗೆಳೆದಿದ್ದಾರೆ. ಪ್ರತಿನಿತ್ಯ ಭಿಕ್ಷೆ ಬೇಡುವವರು ಕನಿಷ್ಠ 2 ಸಾವಿರ ಸಂಪಾದನೆ ಮಾಡುತ್ತಾರೆ. ಬೆಂಗಳೂರಿನಲ್ಲಿ ಕನಿಷ್ಠ 20 ಸಾವಿರ ಭಿಕ್ಷುಕರಿದ್ದಾರೆ. ಸರ್ಕಾರ ಭಿಕ್ಷಾಟನೆ ಅಪರಾಧದ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಿದೆ ಅಂತ ಕೇಳುತ್ತಿದ್ದಾರೆ.

One Comment

Leave a Reply to John Cancel reply

Your email address will not be published.

Back to top button