ಬಾಗಲಕೋಟೆ: ತೇರದಾಳ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ 13 ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದು, ಪೊಲೀಸರು ಓರ್ವ ಜಮೀನು ಸಾಗುವಳಿದಾರನನ್ನು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜುಗಲಾಸಾರ, ಜಮಖಂಡಿ ಡಿವೈಎಸ್ ಪಿ ಎಂ. ಪಾಂಡುರಂಗಯ್ಯ ಮಾರ್ಗದರ್ಶನದಲ್ಲಿ ರಬಕವಿ-ಬನಹಟ್ಟಿ ತಹಶಿಲ್ದಾರ್ ಸಂಜಯ್ ಇಂಗಳೆ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ತೇರದಾಳ ಠಾಣಾಧಿಕಾರಿ ರಾಜು ಬೀಳಗಿ ಅವರ ತಂಡ ಈ ಶೋಧ ಕಾರ್ಯಮಾಡಿತ್ತು. ಈ ವೇಳೆ ತೇರದಾಳ ವ್ಯಾಪ್ತಿಯ ಜಮೀನಿನಲ್ಲಿ ಬೆಳೆದಿದ್ದ 13 ಗಾಂಜಾ ಗಿಡಗಳು ಒಟ್ಟು 7 ಕೆಜಿ, 490 ಗ್ರಾಂನ ರೂ. 37,450 ರೂ. ಬೆಲೆಬಾಳುವ ಗಾಂಜಾ ಬೆಳೆ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟ 5 ವರ್ಷಗಳಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಲಿದೆ: ಬೊಮ್ಮಾಯಿ
Advertisement
Advertisement
ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬನಹಟ್ಟಿ ಪೊಲೀಸ್ ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ಈ ಪ್ರಕರಣದ ತನಿಖೆ ಕೈಗೊಂಡಿದ್ದರು. ಈ ಪರಿಣಾಮ ಗಾಂಜಾ ಬೆಳೆದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸೋಲೂರಿನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಹುಲ್ಲನ್ನು ಬಳಸಿ ಬಯೋ ಗ್ಯಾಸ್ ತಯಾರು – ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ
Advertisement
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ತೇರದಾಳ ಠಾಣೆಯ ಸಿಬ್ಬಂದಿ ಕೆ.ಎಚ್.ಸನ್ನಟ್ಟಿ, ಎಂ.ಆರ್.ಕೆಂಚನ್ನವರ, ಎ.ಬಿ.ಸವದಿ, ಎಮ್.ಎಮ್.ಎತ್ತಿನಮನಿ, ಎಸ್.ಎಸ್.ಜಕಾತಿ, ಎಸ್.ಐ.ಸೋನಾವಣೆ, ಎಮ್.ಆರ್.ಗುರವ ಇದ್ದರು. ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜುಗಲಾಸರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.