ಭಟ್ಕಳದಲ್ಲಿ ಅಕ್ರಮ ಕೋಣ ಸಾಗಾಟ – 17 ಕೋಣಗಳು ವಶ, ಇಬ್ಬರು ಅರೆಸ್ಟ್

Public TV
1 Min Read
illegal buffalo trafficking in bhatkal two arrested

-2 ಕೋಣಗಳು ವಾಹನದಲ್ಲೇ ಸಾವು

ಕಾರವಾರ: ಭಟ್ಕಳದಿಂದ (Bhatkal) ಮಂಗಳೂರು (Mangaluru) ಭಾಗಕ್ಕೆ ಅಕ್ರಮವಾಗಿ ಕೋಣಗಳ ಸಾಗಾಟ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಹಾವೇರಿ ಮೂಲದ ಜೈನುಲ್ಲಾ ಚಮನ್ ಸಾಬ್ (28), ಇಮಾಮ್ ಹುಸೇನ್ ಮೌಲಾಲಿ ಸಾಬ್ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಹಾಸನ| ಕಟ್ಟಡ ಕುಸಿದು ಗಾಯಗೊಂಡಿದ್ದ ಮಹಿಳೆ ಸಾವು – ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಪಿಎಸ್‍ಐ ರನ್ನಗೌಡ ಪಾಟೀಲ್ ಮತ್ತು ಭರ್ಮಪ್ಪ ಬೆಳಗಲಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ವಾಹನದ ಸಮೇತ 17 ಕೋಣಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ 2ಕೋಣಗಳು ಸಾವನ್ನಪ್ಪಿವೆ. ಈ ಸಂಬಂಧ ಭಟ್ಕಳದ ಶಿರಾಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಅತ್ತೆ, ಮಾವನ ಮೇಲೆ ಲೇಡಿ ಡಾಕ್ಟರ್ ಹಲ್ಲೆ – ರಾಕ್ಷಸ ರೂಪ ತಾಳಿದ ವೈದ್ಯೆಯ ವೀಡಿಯೊ ವೈರಲ್

Share This Article