ಬೆಂಗಳೂರು: ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಯಬಾರದು ಎಂದು ಜಲಮಂಡಳಿ ಆದೇಶ ಮಾಡಿದ್ದರೂ ಸಹ ನಗರದಲ್ಲಿ ಅನುಮತಿ ಪಡೆಯದೇ ಬೋರ್‍ವೆಲ್ ಕೊರೆಯುತ್ತಿರುವುದು ಪತ್ತೆಯಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 20 ಅಕ್ರಮ ಬೋರ್‍ವೆಲ್‍ಗಳ ಪತ್ತೆಯಾಗಿದೆ. ಅಕ್ರಮವಾಗಿ ಬೋರ್‌ವೆಲ್ (Illegal Borewells) ಕೊರೆಸಿದ 20 ಜನರ ವಿರುದ್ಧ ಜಲಮಂಡಳಿ ದೂರು ದಾಖಲಿಸಿದೆ.
ಬೆಂಗಳೂರಿನಲ್ಲಿ (Bengaluru) ನೀರಿನ ಅಭಾವ ಇರುವ ಹಿನ್ನೆಲೆ ಜಲಮಂಡಳಿ ನಾನಾ ಕ್ರಮಗಳನ್ನು ಜಾರಿ ಮಾಡುತ್ತಿದೆ. ಇದರ ಮಧ್ಯೆದಲ್ಲಿ ಅನಧಿಕೃತವಾಗಿ ಬೋರ್‌ವೆಲ್ ಕೊರೆಯಬಾರದು ಎಂದು ಆದೇಶ ಸಹ ಮಾಡಿದೆ. ಆದೇಶವನ್ನೂ ಲೆಕ್ಕಿಸದೆ ಬೆಂಗಳೂರಿನ ದಕ್ಷಿಣ ವಲಯ, ಪೂರ್ವ ವಲಯ ಕೆಆರ್‍ಪುರಂ ಮತ್ತು ಮಹಾದೇವಪುರ ವಲಯದಲ್ಲಿ 20 ಬೋರವೆಲ್‍ಗಳನ್ನು ಅನಧಿಕೃತವಾಗಿ ಕೊರೆದಿರುವುದು ಪತ್ತೆಯಾಗಿದೆ. ಕೆಆರ್ ಪುರಂನ ವಿಭೂತಿಪುರದಲ್ಲಿ ಅನಧಿಕೃವಾಗಿ ಬೋರ್‌ವೆಲ್ ಕೊರೆಯುತ್ತಿದ್ದು, ಈ ಬಗ್ಗೆ ಪೊಲೀಸ್ (Police) ಠಾಣೆಗೆ ದೂರು ನೀಡಲಾಗಿದೆ. ಸುಮಾರು 20 ಅಕ್ರಮ ಬೋರ್‍ವೆಲ್ ಪತ್ತೆಯಾಗಿದ್ದು, ಕೊರೆಸಿದವರ ವಿರುದ್ಧ ಜಲಮಂಡಳಿ ಕಾನೂನು ಹೋರಾಟಕ್ಕೆ ಮುಂದಾಗಿದೆ. ಇದನ್ನೂ ಓದಿ: ಮುಂಬೈ ಪೊಲೀಸರ ಸೋಗಿನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ – ಎಫ್‍ಐಆರ್ ದಾಖಲು
Advertisement
Advertisement
ನಗರದಲ್ಲಿ ಅನಧಿಕೃತವಾಗಿ ಬೋರ್‌ವೆಲ್ ಕೊರೆದಿರೋದು ಕಂಡು ಬಂದರೆ ಸಾರ್ವಜನಿಕರು ಜಲಮಂಡಳಿಗೆ ದೂರು ಕೊಡಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ದೂರು ನೀಡಲು, 1619 ನಂಬರ್‌ಗೆ ಕರೆ ಮಾಡುವಂತೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ 2ನೇ ಅತಿ ದೊಡ್ಡ ನೌಕಾ ವಿಮಾನ ನಿಲ್ದಾಣದ ಮೇಲೆ ದಾಳಿ