ಚಿಕ್ಕಮಗಳೂರು: ಎಸ್ಟೇಟ್ ಮ್ಯಾನೇಜರ್ ಒಬ್ಬರ ಮೇಲೆ ಅಕ್ರಮ ಬಾಂಗ್ಲಾ ವಲಸಿಗರು (Illegal Bangladeshi immigrants) ಕಲ್ಲು ತೂರಾಟ ನಡೆಸಿದ ಘಟನೆ ಕೊಪ್ಪ (Koppa) ತಾಲೂಕಿನ ಹೂವಿನಗುಂಡಿ ಗ್ರಾಮದಲ್ಲಿ ನಡೆದಿದೆ.
ಅಕ್ರಮ ಬಾಂಗ್ಲಾ ವಲಸಿಗರಿಂದ ಕಲ್ಲು ತೂರಾಟಕ್ಕೊಳಗಾದ ಎಸ್ಟೇಟ್ ಮ್ಯಾನೇಜರ್‍ನನ್ನು ಕೀರ್ತಿರಾಜ್ ಎಂದು ಗುರುತಿಸಲಾಗಿದೆ. ಇಷ್ಟೇ ಅಲ್ಲದೇ ಮರದ ದಿಮ್ಮೆಯಿಂದ ಹಲ್ಲೆಗೆ ಯತ್ನಿಸಲಾಗಿದೆ. ಸುಮಾರು 50 ಜನರಿಂದ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಿದ್ದಾರೆ.
ಕೀರ್ತಿರಾಜ್ ಹಾಗೂ ಭದ್ರಾ ಎಸ್ಟೇಟ್ ಮಧ್ಯೆ ಜಮೀನು ವಿವಾದ ಇತ್ತು. 50 ವರ್ಷದ ವಿವಾದ ಹೈಕೋರ್ಟಿನಲ್ಲಿ ಸುಬ್ಬಣ್ಣ ಅವರ ಪರ ಆಗಿತ್ತು. ಸುಬ್ಬಣ್ಣ ಅವರ ಮಗ ಕೀರ್ತಿರಾಜ್ ತೋಟಕ್ಕೆ ಹೋದಾಗ ಕಲ್ಲು ತೂರಾಟ ನಡೆದಿದೆ. ಕಲ್ಲೇಟಿನಿಂದ ಗಾಯಗೊಂಡಿರುವ ಕೀರ್ತಿರಾಜ್ ಅವರನ್ನು ಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ಸಾಂನವರು ಎಂದು ಇಲ್ಲಿಗೆ ಕೆಲಸಕ್ಕೆ ಬರುತ್ತಾರೆ. ಅವರೆಲ್ಲಾ ಅಕ್ರಮ ಬಾಂಗ್ಲಾ ನಿವಾಸಿಗಳು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.