ಹುಬ್ಬಳ್ಳಿ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದ ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ನವನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಬಾನಾ ಆಯಟ್ಟಿ ಹಾಗೂ ಪ್ರೀಯಕರ ಬಾಷಾಸಾಬ್ ಬಂಧಿತ ಆರೋಪಿಗಳು. ಇವರು ಹುಬ್ಬಳ್ಳಿಯ ಬಲ್ಡೋಜರ ನಿವಾಸಿ ಮೊಹಮ್ಮದ್ ರಫೀಕ್ ಆಯಟ್ಟಿ (40)ಯನ್ನು ಜೂನ್ 11 ರಂದು ಪತ್ನಿ ಶಬಾನಾ ಆಯಟ್ಟಿ ಹಾಗೂ ಪ್ರೀಯಕರ ಬಾಷಾಸಾಬ್ ಹುಬ್ಬಳ್ಳಿ ಮಾರಡಗಿ ರಸ್ತೆಯಲ್ಲಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
Advertisement
ಕಳೆದ 10 ವರ್ಷದ ಹಿಂದೆ ಮೊಹಮ್ಮದ್ ರಫೀಕ್ ಮತ್ತು ಶಬಾನಾ ಇಬ್ಬರು ಮದುವೆ ಆಗಿದ್ದರು. ಆದರೆ ಪತ್ನಿ ಶಬಾನಾ, ಭಾಷಾಸಾಬ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಷಯ ಪತಿಗೆ ಗೊತ್ತಾಗಿದ್ದು, ಇದನ್ನು ಪ್ರಶ್ನೆ ಮಾಡಿದ ಪತಿಯನ್ನು ಪತ್ನಿ ಮತ್ತು ಪ್ರಿಯಕರ ಕೊಡಲಿಯಿಂದ ಕೊಚ್ವಿ ಕೊಲೆ ಮಾಡಿ ಪರಾರಿಯಾಗಿದ್ದಳು.
Advertisement
ಈ ಕುರಿತು ಮೊದಲು ಹುಬ್ಬಳ್ಳಿಯ ನವನಗರ ಪೊಲೀಸರು ಅಪರಿಚಿತ ಶವ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ ಹೆಂಡತಿಯನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದಾಗ, ಹೆಂಡತಿ ಸತ್ಯ ಬಾಯಿ ಬಿಟ್ಟಿದ್ದಾಳೆ. ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Advertisement