ಬೆಂಗಳೂರು: ‘ರಿಸರ್ವ್ ಫಾರೆಸ್ಟ್’ (ರಕ್ಷಿತ ಅರಣ್ಯ ಪ್ರದೇಶ) ಅಂದರೆ ಕಾಡಿನೊಳಗೆ ಯಾರೂ ಪ್ರವೇಶಿಸುವಂತಿಲ್ಲ. ಆದರೆ ಇದು ಹೆಸರಿಗಷ್ಟೇ ರಿಸರ್ವ್ ಫಾರೆಸ್ಟ್. ಇಲ್ಲಿ ಎಲ್ಲಿ ಬೇಕಾದ್ರೂ ರಾಜಾರೋಷವಾಗಿ ಓಡಾಡಬಹುದು. ಕೆರೆ ಹಾಳು ಮಾಡಿದ ಬೆಂಗಳೂರು ಮಂದಿ, ಈಗ ಕಾಡು ಹಾಳು ಮಾಡಲು ಹೊರಟಿದ್ದಾರೆ.
ಇದು ಬೆಂಗಳೂರಿನ ಹೆಸರಘಟ್ಟ ರಕ್ಷಿತಾರಣ್ಯ ಪ್ರದೇಶ. ಆದ್ರೆ ಈ ಕಾಡಿನೊಳಕ್ಕೆ ನೀವು ಆರಾಮಾಗಿ ಎಂಟ್ರಿ ಕೊಟ್ಟು ಎಲ್ಲಿ ಬೇಕಾದ್ರು ಓಡಾಡಿ ಬರಬಹುದು. ಅಷ್ಟೇ ಯಾಕೆ ಇಲ್ಲೇ ನೈಟ್ ಕ್ಯಾಂಪ್ ಹಾಕಿ ಪಾರ್ಟಿ ಕೂಡ ಮಾಡಬಹುದು. ಇಲ್ಲಿ ಯಾರೂ ಹೇಳೋರು ಇಲ್ಲ ಕೇಳೋರು ಇಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಯಾರ ಭಯವಿಲ್ಲದೇ ಪ್ರೇಮಿಗಳು ಓಡಾಡುತ್ತಾರೆ. ಎಲ್ಲೆಂದರಲ್ಲಿ ಪಾರ್ಟಿ ಮಾಡಿ ಎಣ್ಣೆ ಬಾಟಲ್ ಗಳನ್ನ ಎಸೆದು ಹೋಗಿದ್ದಾರೆ. ನವಿಲುಗಳು ಹೆಚ್ಚಾಗಿರುವ ಈ ಪ್ರದೇಶವನ್ನ ನವಿಲು ರಕ್ಷಿತಾರಣ್ಯ ಪ್ರದೇಶ ಅಂತ ಘೋಷಿಸಲಾಗಿದೆ. ಇಲ್ಲಿ ನಡೆಯುತ್ತೀರುವ ಈ ಅಕ್ರಮ ಚಟುವಟಿಕೆಗಳಿಂದಾಗಿ ನವಿಲುಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ. ಇಷ್ಟೆಲ್ಲಾ ಆಗ್ತಿದ್ರೂ ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ.
Advertisement
Advertisement
ಹೆಸರಘಟ್ಟ ರಕ್ಷಿತಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಹೆಸರಘಟ್ಟ ಕೆರೆ ಇದೆ. ಹಾಗೆ ಪಕ್ಕಕ್ಕೆ ಕಣ್ಣುಹಾಯಿಸಿದ್ರೆ ಇಲ್ಲಿ ಪ್ರವೇಶ ಮಾಡುವುದು, ಕೆರೆಯಲ್ಲಿ ಬಟ್ಟೆ ಒಗೆಯುವುದು, ಮೀನು ಹಿಡಿಯುವುದು ನಿಷೇಧಿಸಲಾಗಿದೆ, ನಿಯಮ ಮೀರಿದ್ರೆ ಶಿಕ್ಷೆಗೆ ಗುರಿ ಪಡಿಸಲಾಗುತ್ತೆ ಅಂತ ಬರೆದಿರುವ ಬೋರ್ಡ್ ಹಾಕಲಾಗಿದೆ. ಎಲ್ಲ ನಿಬಂಧನೆಗಳು ಕೇವಲ ಬೋರ್ಡ್ ಗಷ್ಟೇ ಸೀಮಿತವಾಗಿದ್ದು ಇಲ್ಲಿ ರಾಜಾರೋಷವಾಗಿ ಮೀನು ಹಿಡಿಯುತ್ತಾರೆ, ಜಲಮಂಡಳಿಯಾಗಲೀ, ಅರಣ್ಯ ಇಲಾಖೆಯವರಾಗಲೀ ತಡೆಯೋ ಗೋಜಿಗೇ ಹೋಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
ಕೆರೆಯಲ್ಲಿ ಇಷ್ಟೆಲ್ಲಾ ಅಕ್ರಮ ಚಟುವಟಿಗೆಗಳು ನಡೆಯುತ್ತಿರುವುದರಿಂದ ವಿದೇಶದಿಂದ ಈ ಕೆರೆಗೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆ ಸಹ ಕಡಿಮೆಯಾಗುತ್ತಿದೆ. ಬೆಂಗಳೂರು ಮಂದಿಯ ಮೂಜು ಮಸ್ತಿಯಿಂದಾಗಿ ನವಿಲುಗಳ ಅಸ್ತಿತ್ವಕ್ಕೂ ಧಕ್ಕೆಯಾಗ್ತಿದೆ. ಈಗಲೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ರೆ ಮುಂದಿನ ದಿನ ರಕ್ಷಿತಾರಣ್ಯದ ಜೊತೆ ಕೆರೆಯೂ ನಾಶವಾಗಲಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv