ಮೈಸೂರು: ಮಹಾರಾಷ್ಟ್ರ ಮತ್ತ ಉತ್ತರಪ್ರದೇಶ ರಾಜ್ಯಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಸುಲಭವಾಗಿ ಸಿಗುತ್ತವೆ. ಆದ್ರೆ ಬಿಜೆಪಿ ಮುಖಂಡರು ಇಲ್ಲಿಗೆ ಬಂದು ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ ಅಂತಾ ಗೃಹ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.
ಶುಕ್ರವಾರ ನಗರದಲ್ಲಿ ಗನ್ ತೋರಿಸಿ ರಾಜಕಾರಣಿಗಳನ್ನು ಬೆದರಿಸಲು ಪ್ಲಾನ್ ಮಾಡಿದ್ದ ಬಿಜೆಪಿ ಕಾರ್ಯಕರ್ತ ಬಂಧನ ಕುರಿತು ಮಾತನಾಡಿದ ಸಚಿವರು, ನಮ್ಮಲ್ಲಿ ಭೂಗತ ವ್ಯಕ್ತಿಗಳು ಮಾತ್ರ ಅಕ್ರಮ ಸಶಸ್ತ್ರ ಹೊಂದಿದ್ದಾರೆ. ಕರ್ನಾಟಕದಲ್ಲಿ ಸಾಮನ್ಯ ಜನರಿಗೆ ಸುಲಭವಾಗಿ ಆಯುಧಗಳು ಸಿಗದಂತೆ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ನಿಯಮಾವಳಿಗಳು ನಮ್ಮ ರಾಜ್ಯದಲ್ಲಿವೆ. ಹಾಗಾಗಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಿಂದ ಶಸ್ತ್ರಾಸ್ತ್ರಗಳು ರವಾನೆ ಆಗುತ್ತಿವೆ. ಮೂಲದಲ್ಲೇ ಸಮಸ್ಯೆ ಬಗೆಹರಿದರೆ ಮಾತ್ರ ಮಾಫಿಯಾ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಗನ್ ತೋರಿಸಿ ರಾಜಕಾರಣಿಗಳನ್ನ ಬೆದರಿಸಲು ಪ್ಲಾನ್ ಮಾಡಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್!
Advertisement
Advertisement
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಜ್ಯಕ್ಕೆ ಬಂದು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಅಂತಾ ಹೇಳ್ತಾರೆ. ಆದ್ರೆ ಅವರ ತವರು ರಾಜ್ಯದಲ್ಲಿಯೇ ಕ್ರೈಂ ರೇಟ್ ಹೆಚ್ಚಿದೆ. ಇನ್ನೂ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಗಳು ಅಪರಾಧದ ಬಗ್ಗೆ ಮಾತನಾಡ್ತಾರೆ. ಅವರ ಮೇಲೆಯೇ ಕೊಲೆಯ ಆರೋಪ ಇದೆ ಅಂತಾ ಹರಿಹಾಯ್ದರು.
Advertisement
ಈ ಹಿಂದೆ ವಿಧಾನಸೌಧದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಯುತ್ತಿದೆ ಅಂತಾ ಹೇಳಿದ್ದೆ. ಈಗ ಎಸ್‍ಐಟಿ ಶಂಕಿತ ಆರೋಪಿಯೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೊಂದು ಗಂಭೀರವಾದ ಪ್ರಕರಣವಾಗಿದ್ದರಿಂದ ಎಲ್ಲ ಮಾಹಿತಿಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಅಂತಾ ಹೇಳಿದ್ರು.