– ಏನೇ ಆಗಲಿ ರಾಹುಲ್ಲನೊಂದಿಗೆ ಬದುಕುತ್ತೀನಿ ಅಂದ್ಳು ಸಪ್ನೋಂಕಿ ರಾಣಿ
ಲಕ್ನೋ: ಪ್ರೀತಿ (Love) ಎಂಬುದು ಮಾಯೆ.. ಅದು ಹುಟ್ಟಿದಾಗ ಗಾಳಿಯಲ್ಲಿ ತೇಲಾಡುವ ಅನುಭವ… ಎದೆಯಲ್ಲಿ ಪುಳಕ, ಅಸಹನೀಯ ಭಾರ. ಇದರ ಕೊನೆಯ ಹಂತವೇ ಮದುವೆ. ಆದ್ರೆ ಈ ಪ್ರೀತಿ ಅದು ಯಾರಿಗೆ ಯಾವಾಗ ಹೇಗೆ, ಯಾರ ಮೇಲೆ ಹುಟ್ಟುತ್ತೆ? ಅನ್ನೋ ಕಾರಣವೇ ನಿಗೂಢ.. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲ ವಿವಾಹಿತ ಮಹಿಳೆಯರು ಯುವಕರನ್ನು ವರಿಸುತ್ತಿರುವ ಪ್ರಸಂಗ ಆಗಾಗ್ಗೆ ಕಂಡುಬರುತ್ತಿವೆ. ಇದಕ್ಕೆ ಉತ್ತರ ಪ್ರದೇಶದ (Uttar Pradesh) ಘಟನೆ ತಾಜಾ ಉದಾಹರಣೆಯಾಗಿದೆ.
ತನ್ನ ಮಗಳಿಗೆ ನಿಶ್ಚಯವಾಗಿದ್ದ (daughter’s fiance) ಭಾವಿ ಅಳಿಯನೊಂದಿಗೆ ಮನೆಯಲ್ಲಿದ್ದ 3.5 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಳು. ಇದೀಗ ಪೊಲೀಸರಿಗೆ ಶರಣಾಗಿದ್ದು, ತಾನು ಓಡಿಹೋಗಲು ಕಾರಣ ಏನೆಂಬುದನ್ನ ತಿಳಿಸಿದ್ದಾಳೆ. ಅಲ್ಲದೇ ಅವನನ್ನೇ ಮದುವೆಯಾಗುತ್ತೇನೆಂದು ಪಟ್ಟು ಹಿಡಿದಿದ್ದಾಳೆ. ಇದನ್ನೂ ಓದಿ: ಪಿಯುಸಿ ಹುಡುಗನ ಮದುವೆಯಾದ ಮೂರು ಮಕ್ಕಳ ತಾಯಿ!
ಓಡಿ ಹೋಗಿದ್ದ ಮಹಿಳೆ ಸಪ್ನಾ, ಭಾವಿ ಅಳಿಯ ರಾಹುಲ್ ಕುಮಾರ್. ತನ್ನ ಪತಿ ಕುಡಿದು ಥಳಿಸುತ್ತಿದ್ದ, ಮಗಳು ಕೂಡ ಪದೇ ಪದೇ ಜಗಳವಾಡುತ್ತಿದ್ದಳು ಇದರಿಂದ ಬೇಸತ್ತು ಅವನೊಂದಿಗೆ ಓಡಿ ಹೋದೆ. ನನ್ನ ಕಥೆಯನ್ನು ಕೇಳಿ ರಾಹುಲ್ ಓಡಿ ಹೋಗಲು ಒಪ್ಪಿಕೊಂಡ. ಇಲ್ಲದಿದ್ದರೆ, ಆತ್ಮಹತ್ಯೆ ಒಂದೇ ದಾರಿಯಾಗಿತ್ತು. ಪೊಲೀಸರು ಹುಡುಕಾಡುತ್ತಿರುವುದು ಗೊತ್ತಾಗಿ ಮರಳಿ ಬಂದೆ. ಏನೇ ಆಗಲಿ ನಾನು ರಾಹುಲ್ ಜೊತೆಗೇ ಬದುಕುತ್ತೇನೆ, ಅವನನ್ನೇ ಮದುವೆಯಾಗುತ್ತೇನೆ ಅಂತ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ತನ್ನ ಮಗಳನ್ನು ಮದುವೆಯಾಗಬೇಕಿದ್ದ ಭಾವಿ ಅಳಿಯನೊಂದಿಗೆ ಮಹಿಳೆ ಜೂಟ್
ಅಲ್ಲದೇ ಲಕ್ಷಗಟ್ಟಲೇ ಚಿನ್ನಾಭರಣ, ಹಣ ಕದ್ದೊಯ್ದಿದ್ದಾರೆ ಎನ್ನುವ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನು ಹೋಗುವಾಗ ನನ್ನ ಮೊಬೈಲ್, 200 ರೂ.ಪಾಯಿ ಮಾತ್ರ ತೆಗೆದುಕೊಂಡು ಹೋಗಿದ್ದೆ. ಆಕೆಯ ಮತ್ತೊಬ್ಬ ಮಗಳು ಶಿವಾನಿ ಮನೆಯಲ್ಲಿದ್ದ 3.5 ಲಕ್ಷ ರೂಪಾಯಿ ನಗದು ಮತ್ತು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಹುಲ್ ಕುಮಾರ್‌ನನ್ನು ವಿವಾಹವಾಗುತ್ತೀಯಾ ಎಂದು ಕೇಳಿದ್ದಕ್ಕೆ ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಸಪ್ನಾಳ ಕುಟುಂಬಸ್ಥರು ಅವಳು ಮನೆಗೆ ವಾಪಸ್ ಬರೋದು ಬೇಡ ತೆಗೆದುಕೊಂಡು ಹೋಗಿರುವ ಚಿನ್ನಾಭರಣ ಕೊಟ್ಟರೆ ಸಾಕು ಅಂತ ಹೇಳಿದ್ದಾರೆ. ಇದನ್ನೂ ಓದಿ: ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಪೊಲೀಸ್ ರಕ್ಷಣೆ ಇಲ್ಲ: ಹೈಕೋರ್ಟ್
ಏನಿದು ಪ್ರಕರಣ?
ಸಪ್ನಾಳ ಮಗಳು ಅನಿತಾಳಿಗೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. 10 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳನ್ನು ಸಹ ಮುದ್ರಿಸಿ, ಸಂಬಂಧಿಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ತನ್ನ ಮಗಳನ್ನು ಮದುವೆಯಾಗಬೇಕಿದ್ದ ಯುವಕನೊಂದಿಗೆ ಸಪ್ನಾ ಓಡಿ ಹೋಗಿದ್ದಳು. ಇದು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸಿತ್ತು.
ನಾನು ಏಪ್ರಿಲ್ 16 ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು. ಆದರೆ ನನ್ನ ತಾಯಿ ಭಾನುವಾರ ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಅಲ್ಮಾರಾದಲ್ಲಿ 3.5 ಲಕ್ಷ ರೂ. ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳಿದ್ದವು. ಅವನು ಕೇಳಿದ್ದನ್ನೆಲ್ಲಾ ಅವಳು ಮಾಡಿದ್ದಾಳೆ. ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆಂದು ವಧು ಅನಿತಾ ನೊಂದು ನುಡಿದಿದ್ದಳು.
ಸಪ್ನಾಳ ಪತಿ ಕುಮಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಸಪ್ನಾ ಮತ್ತು ರಾಹುಲ್ ಪತ್ತೆಗೆ ಬಲೆಬೀಸಿದ್ದರು. ಇದನ್ನೂ ಓದಿ: Mandya | ಅಪರಿಚಿತ ವಾಹನ ಡಿಕ್ಕಿ – ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವು