ಬೆಂಗಳೂರು: ಶಿವಮೊಗ್ಗ ಲೋಕಸಭಾ ಉಪಚುನಾವಣೆ ಕುರಿತು ನಮ್ಮನ್ನು ಬಿಟ್ಟು ಬಿಡಿ ಪ್ಲೀಸ್.. ನಮಗೆ ಈಗ ರಾಜಕೀಯಸ ಸಹವಾಸವೇ ಬೇಡ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸಿಎಂ ಕುಮಾರಸ್ವಾಮಿ ಅವರಿಗೆ ಹೇಳಿದ್ದಾರಂತೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಮೈತ್ರಿ ಸರ್ಕಾರದ ಒಪ್ಪಂದದಂತೆ ಜೆಡಿಎಸ್ ಗೆ ಶಿವಮೊಗ್ಗ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಕಳೆದ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್‍ಕುಮಾರ್ ಸ್ಪರ್ಧಿಸಿ ಯಡಿಯೂರಪ್ಪರ ವಿರುದ್ಧ ಸೋಲು ಕಂಡಿದ್ದರು. ಹಾಗಾಗಿ ಜೆಡಿಎಸ್ ನಿಂದ ಮತ್ತೊಮ್ಮೆ ಗೀತಾ ಅವರನ್ನೇ ಕಣಕ್ಕಿಳಿಸಲು ಮಾಜಿ ಪ್ರಧಾನಿ ದೇವೇಗೌಡರು ಪ್ಲಾನ್ ಮಾಡಿದ್ದರು.
Advertisement
Advertisement
ಪತ್ನಿ ಗೀತಾ ಅವರನ್ನ ಉಪ ಚುನಾವಣೆಗೆ ನಿಲ್ಲಿಸಲು ಶಿವರಾಜ್‍ಕುಮಾರ್ ಹಿಂದೇಟು ಹಾಕುತ್ತಿದ್ದಾರಂತೆ. ಸಿಎಂ ಜೊತೆಗಿನ ಮಾತುಕತೆ ವೇಳೆ, ಯಾವುದೇ ಕಾರಣಕ್ಕೂ ಬೈ ಎಲೆಕ್ಷನ್ ಬೇಡ. ಈ ಮೊದಲೇ ನಾವು ಅನುಭವಿಸಿದ್ದು ಸಾಕು, ನಮಗೆ ಎಲೆಕ್ಷನ್ ಸಹವಾಸ ಬೇಡ. ಮಧು ಬಂಗಾರಪ್ಪ ಸ್ಪರ್ಧೆ ಮಾಡೋದಾದರೆ ನಾವು ಬಂದು ಪ್ರಚಾರ ಮಾಡುತ್ತೇವೆ. ಆದರೆ ಮಧು ಬಂಗಾರಪ್ಪ ಮನವೊಲಿಸೋದು ನಿಮಗೆ ಬಿಟ್ಟಿದ್ದು ಎಂದು ಶಿವರಾಜ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
ಸ್ಪರ್ಧೆಗೆ ಹಿಂದೇಟು ಯಾಕೆ?
ಉಪ ಚುನಾವಣೆಯ ಅಧಿಕಾರವಧಿ ಕಡಿಮೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಂಗಾರಪ್ಪ ಕುಟುಂಬ ಹಿಂದೇಟು ಹಾಕುತ್ತಿರಬಹುದು. 2019ರ ಚುನಾವಣೆಗೆ ಸಂಪನ್ಮೂಲ ಕ್ರೂಢೀಕರಣಕ್ಕೂ ತೊಂದರೆ ಆಗಬಹುದು. ಇನ್ನು ಮಧು ಬಂಗಾರಪ್ಪ ಇಷ್ಟು ಬೇಗ ರಾಷ್ಟ್ರ ರಾಜಕಾರಣಕ್ಕೆ ಹೋಗೋದು ಬೇಡ. ಸಮ್ಮಿಶ್ರ ಸರ್ಕಾರದಲ್ಲಿಯೇ ಅಧಿಕಾರಕ್ಕಾಗಿ ಒಲವು ತೋರಿಸುವ ಸಾಧ್ಯತೆಗಳಿವೆ. ಇತ್ತ ಗೀತಾ ಶಿವರಾಜ್‍ಕುಮಾರ್ ಕಳೆದ ಬಾರಿ ಸೋಲಿನ ಕಹಿಯನ್ನು ಮರೆತ ಹಾಗಿಲ್ಲ.
Advertisement
ಚುನಾವಣೆ ಘೋಷಣೆಯೂ ಮುನ್ನವೇ ವಿದೇಶ ಪ್ರವಾಸಕ್ಕೆ ತೆರಳಿರುವ ಮಧು ಬಂಗಾರಪ್ಪ, ಅಕ್ಟೋಬರ್ 16ಕ್ಕೆ ಸ್ವದೇಶಕ್ಕೆ ಹಿಂದಿರುಗಲಿದ್ದಾರೆ. ಆದ್ರೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನಾಂಕ. ಇತ್ತ ಬಿಜೆಪಿ ಬಿ.ವೈ.ರಾಘವೇಂದ್ರ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಯಡಿಯೂರಪ್ಪರನ್ನು ಸ್ವಕ್ಷೇತ್ರದಲ್ಲಿಯೇ ಕಟ್ಟಿ ಹಾಕಬೇಕು ಎಂದು ಪ್ಲಾನ್ ಮಾಡುತ್ತಿರುವ ದೇವೇಗೌಡರು ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ. ಒಂದು ವೇಳೆ ಸೂಕ್ತ ಅಭ್ಯರ್ಥಿ ಸಿಗದೇ ಪಕ್ಷದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡುವ ಸಾಧ್ಯತೆ ಗಳು ಇವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv