ಬಾಲಿವುಡ್ (Bollywood) ಬ್ಯೂಟಿ ಇಲಿಯಾನಾ (Ileana) ಅವರು ತಮ್ಮ ಚೊಚ್ಚಲ ಮಗುವಿನ ಆಗಮನದ ಬಗ್ಗೆ ಖುಷಿಯಾಗಿದ್ದಾರೆ. ತಾಯ್ತನದ ಖುಷಿಯನ್ನ ನಟಿ ಫೀಲ್ ಮಾಡ್ತಿದ್ದಾರೆ. ಮದುವೆಯಾಗದೇ ತಾಯ್ತಿಯಾಗುತ್ತಿರುವ ನಟಿ, ಹೊಸ ಬೇಬಿ ಬಂಪ್ ಫೋಟೋವನ್ನ ಶೇರ್ ಮಾಡಿದ್ದಾರೆ. ತನ್ನ ಮಿಸ್ಟರಿ ಮ್ಯಾನ್ ಬಗ್ಗೆ ಗುಟ್ಟು ಬಿಟ್ಟು ಕೊಟ್ಟ ಬೆನ್ನಲ್ಲೇ ಮತ್ತೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ತಮನ್ನಾ-ರಜನಿ ಕುಣಿದ ‘ಕಾವಾಲಾ’ ಹಾಡಿನ ರಿಲೀಸ್ ಇವೆಂಟ್ ತಡೆದ ಮಳೆರಾಯ
Advertisement
ಇಲಿಯಾನಾ ತಾಯಿಯಾಗಿರುವ ಕಾರಣ, ಸದ್ಯ ಸಿನಿಮಾದಿಂದ ದೂರವಿದ್ದಾರೆ. ಮನೆಗೆ ಹೊಸ ಅತಿಥಿ ಆಗಮನವಾಗುತ್ತಿರೋ ಸಂಭ್ರಮದಲ್ಲಿದ್ದಾರೆ. ಇದೀಗ ಮತ್ತೆ ಬೇಬಿ ಬಂಪ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಡ್ರೆಸ್ ಧರಿಸಿ ಕ್ಯಾಮೆರಾ ನಟಿ ಪೋಸ್ ನೀಡಿದ್ದಾರೆ. ತಾಯ್ತನದ ಕಳೆ ಎದ್ದು ಕಾಣ್ತಿದೆ ಎಂದು ಕೆಲವರು ಮೆಚ್ಚುಗೆ ಸೂಚಿಸಿದ್ರೆ, ಮತ್ತೊಂದಿಷ್ಟು ಜನ ಶೋಕಿ ಎಂದು ಟೀಕೆ ಮಾಡಿದ್ದಾರೆ.
Advertisement
Advertisement
ಧ್ಯಾನ್ ಜೊತೆ ಕನ್ನಡದ ‘ಹುಡುಗ-ಹುಡುಗಿ’ (Huduga Hudgi) ಸಿನಿಮಾದಲ್ಲಿ ಇಲಿಯಾನಾ ಸೊಂಟ ಬಳುಕಿಸಿದ್ದರು. ಸೌತ್- ಹಿಂದಿ ಸಿನಿಮಾಗಳ ಮೂಲಕ ಗಮನ ಸೆಳೆದಿರೋ ಈ ಸುಂದರಿ ಏಪ್ರಿಲ್ನಲ್ಲಿ ತಾವು ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಲಿಯಾನಾಗೆ ಇನ್ನೂ ಮದುವೆ ಆಗಿಲ್ಲ. ಹೀಗಾಗಿ, ಈ ಮಗುವಿಗೆ ತಂದೆ ಯಾರು ಎನ್ನುವ ಪ್ರಶ್ನೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲ ಮೂಡಿತ್ತು. ಇಷ್ಟು ದಿನ ಮಗುವಿನ ತಂದೆ ಬಗ್ಗೆ ನಟಿ ಗುಟ್ಟಾಗಿ ಇಟ್ಟಿದ್ದರು. ಇತ್ತೀಚಿಗೆ ಬಾಯ್ಫ್ರೆಂಡ್ ಮುಖವನ್ನು ಇಲಿಯಾನಾ ರಿವೀಲ್ ಮಾಡಿದ್ದರು. ಅಚ್ಚರಿ ಎಂದರೆ ಆ ವ್ಯಕ್ತಿಯ ಹೆಸರನ್ನು ಅವರು ಗುಟ್ಟಾಗಿಯೇ ಇಟ್ಟಿದ್ದಾರೆ.
Advertisement
ಸೆಲೆಬ್ರಿಟಿಗಳ ಲೈಫಿನಲ್ಲಿ ಲವ್, ಡೇಟಿಂಗ್, ಬ್ರೇಕಪ್ ಎಲ್ಲವೂ ಸರ್ವೇ ಸಾಮಾನ್ಯ. ಇದರ ಜೊತೆಗೆ ಮದುವೆ ಆಗದೆ ಮಗು ಪಡೆಯೋದು, ಮದುವೆ ಆದ ಕೆಲವೇ ತಿಂಗಳಿಗೆ ತಂದೆ- ತಾಯಿ ಆಗೋದು ಕಾಮನ್. ಇಲಿಯಾನಾ ಕೂಡ ಇದೇ ಸಾಲಿಗೆ ಸೇರುತ್ತಾರೆ. ಈಗ ನಟಿ ಶೇರ್ ಮಾಡಿರುವ ಫೋಟೋದಲ್ಲಿ ಅವರ ಪಕ್ಕ ಓರ್ವ ವ್ಯಕ್ತಿಯೊಬ್ಬರಿದ್ದರು. ಈ ಸ್ಟೇಟಸ್ಗೆ ಡೇಟ್ ನೈಟ್ ಎನ್ನುವ ಅಡಿಬರಹ ನೀಡಿದ್ದರು. ಈ ಮೂಲಕ ಇಷ್ಟು ದಿನ ಗುಟ್ಟಾಗಿ ಇಟ್ಟ ವಿಚಾರ ರಿವೀಲ್ ಮಾಡಿದ್ದರು. ಅವರ ಹೆಸರನ್ನು ನಟಿ ತಿಳಿಸಿಲ್ಲ.
ಇಲಿಯಾನಾ ಅವರು ಅನೇಕರ ಜೊತೆ ಡೇಟಿಂಗ್ ಮಾಡಿದ್ದಾರೆ. ಇವರ ಸಂಬಂಧ ಮದುವೆವರೆಗೆ ಹೋಗಿಲ್ಲ. ನಟಿ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತ್ತು. ಮಗುವಿನ ತಂದೆ ಕತ್ರಿನಾ ಸಹೋದರ ಸೆಬಾಸ್ಟಿನ್ ಎಂದೇ ಸುದ್ದಿಯಾಗಿತ್ತು. ಈಗ ಹೆಸರು ಹೇಳದೇ ಬಾಯ್ಫ್ರೆಂಡ್ ಮುಖ ತೋರಿಸುವುದು ಫ್ಯಾನ್ಸ್ಗೆ ಅಚ್ಚರಿ ಮೂಡಿಸಿತ್ತು. ಅಲ್ಲಿಗೆ ಕತ್ರಿನಾ ಸಹೋದರ ಇಲಿಯಾನಾ ಬಾಯ್ಫ್ರೆಂಡ್ ಅಲ್ಲ ಎಂಬುದು ಸ್ಪಷ್ಟವಾಗಿತ್ತು.